ನಮ್ಮ ಕಣ್ಣನ್ನು ಸಂರಕ್ಷಿಸಲು ನಾವು ಕಣ್ಣು ಮಿಟುಕಿಸುತ್ತೇವೆ. ಕಣ್ಣು ಮಿಟುಕಿಸುವುದರಿಂದ ನಮ್ಮ ಕಣ್ಣಿನೊಳಗೆ ಸೇರಿಕೊಂಡಿರುವ ಸೂಕ್ಷ್ಮ ಕಲ್ಮಶ ಮತ್ತು ಧೂಳಿನ ಕಣಗಳನ್ನು ಹೊರಹಾಕಲು ನಮ್ಮ ಕಣ್ಣಿನಲ್ಲಿ ಕಣ್ಣೀರಿನ ಪರದೆಯೊಂದು ಆವರಿಸಿರುತ್ತದೆ. ಕಣ್ಣು ಮಿಟುಕಿಸುವುದರಿಂದಾಗಿ ನಮ್ಮ ಕಣ್ಣುಗಳು ಒಣಗುವುದಿಲ್ಲ. ಪ್ರತಿ ಆರು ಸೆಕೆಂಡುಗಳಿಗೊಮ್ಮೆ ನಾವು ಸಹಜವಾಗಿಯೇ ಕಣ್ಣು ಮಿಟುಕಿಸುತ್ತೇವೆ. ನಮ್ಮ ಕಣ್ಣಿನಲ್ಲಿ ಧೂಳಿನ ಕಣಗಳು ಸೇರಿಕೊಂಡಾಗ ನಾವು ಅತಿ ಹೆಚ್ಚು ಕಣ್ಣು ಮಿಟುಕಿಸುತ್ತೇವೆ ಮತ್ತು ಇದರಿಂದಾಗಿ ಕಣ್ಣೀರಿನ ಗ್ರಂಥಿಗಳು ಹೆಚ್ಚು ಕಣ್ಣೀರನ್ನು ಉತ್ಪತ್ತಿಸುತ್ತವೆ ಮತ್ತು ಕಸವು ಹೊರಹಾಕಲ್ಪಡುತ್ತದೆ.

Leave a Reply