ಹೊಸದಿಲ್ಲಿ: ಮುಲಾಯಂ ಸಿಂಗ್ ಸಹೋದರ ಶಿವಪಾಲ್ ಯಾದವ್ ಸಮಾಜ ವಾದಿ ಪಾರ್ಟಿಗೆ ರಾಜೀನಾಮೆ ನೀಡಿದ್ದಾರೆ. ಅಖಿಲೇಶ್ ಯಾದವ್‍ರ ನಾಯಕತ್ವವನ್ನು ಪ್ರಶ್ನಿಸಿ ಶಿವಲಾಲ್ ಯಾದವ್ ರಾಜೀನಾಮೆ ನೀಡಿದ್ದು ಸಮಾಜವಾದಿ ಸೆಕ್ಯುಲರ್ ಮೋರ್ಚ ಎಂಬ ಹೊಸ ಪಕ್ಷವನ್ನು ರಚಿಸುವುದಾಗಿ ಅವರು ಹೇಳಿದರು.

ತನಗೆ ಪಾರ್ಟಿಯಲ್ಲಿ ಯಾವುದೇ ಹೊಣೆಗಾರಿಕೆ ಕೊಟ್ಟಿಲ್ಲ. ಆದ್ದರಿಂದ ಸಮಾಜವಾದಿ ಸೆಕ್ಯುಲರ್ ಮೋರ್ಚ ಸ್ಥಾಪಿಸುತ್ತಿರುವುದಾಗಿ ಶಿವಪಾಲ್ ಯಾದವ್ ತಿಳಿಸಿದರು. ತಾನು ಸ್ವಲ್ಪ ದಿನ ಕಾದು ನೋಡಿದೆ. ಸಮಾಜವಾದಿ ಪಾರ್ಟಿ ಒಗ್ಗಟ್ಟಿನಿಂದ ಮುಂದೆ ಸಾಗಬೇಕು ಎನ್ನುವ ಕಾರಣಕ್ಕಾಗಿ ಹೀಗೆ ಕಾದೆ. ಇನ್ನು ಪ್ರಯೋಜನವಿಲ್ಲ. ಹೊಸ ಪಾರ್ಟಿ ಕಟ್ಟುತ್ತಿದ್ದು, ಸಮಾಜವಾದಿ ಪಾರ್ಟಿಯಲ್ಲಿ ಮೂಲೆಗೊತ್ತಲಾದ ಯಾರಿಗೂ ತನ್ನಪಾರ್ಟಿ ಸೇರಬಹುದು ಎಂದು ಅವರು ಹೇಳಿದರು.

ತಾನು ಮುಲಾಯಂ ಸಿಂಗ್ ಯಾದವರನ್ನು ಗೌರವಿಸುತ್ತೇನೆ. ಅವರನ್ನು ಎಲ್ಲರೂ ಗೌರವಿಸಬೇಕೆಂದು ಶಿವಪಾಲ್ ಯಾದವ್ ಆಗ್ರಹಿಸಿದರು.

Leave a Reply