Representational Image

ಜೈಪುರ: ನಗರದ 20 ವಯಸ್ಸಿನ ಮಹಿಳೆಯೊಬ್ಬರನ್ನು ವೈದ್ಯ ಮತ್ತು ಅಮಾನತುಗೊಂಡ ಪೊಲೀಸ್ ಕಾನ್ಸ್ಟೇಬಲ್ ಸೇರಿದಂತೆ ಐವರು ಕಿರುಕುಳ ನೀಡಿ ಗ್ಯಾಂಗ್ ರೇಪ್ ಮಾಡಿ
ಆಗ್ರ ರಸ್ತೆಯಲ್ಲಿ ಅರೆ ಬೆತ್ತಲೆ ಸ್ಥಿತಿಯಲ್ಲಿ ಎಸೆದು ಹೋಗಿದ್ದರು ಆಕೆ ಆರೋಪಿಸಿದ್ದಾಳೆ ಎಂದು ಪೊಲೀಸರು ಹೇಳಿಕೆಯನ್ನು ದಿ ಹಿಂದೂ ವರದಿ ಮಾಡಿದೆ.
ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಐದು ಮಂದಿಯ ವಿರುದ್ಧ ಪ್ರಕರಣ ಧಾಖಲಿಸಲಾಗಿದ್ದು, ಕಪಿಲ್ ಶರ್ಮಾ, ದೀಪೇಶ್ ಚತುರ್ವೇದಿ, ಡಾ ಅನುರಾಗ್ ಮತ್ತು ಗುರುತಿಸಲಾಗದ ಇಬ್ಬರು ಇದ್ದಾರೆ. ಈ ಪ್ರಕರಣವನ್ನು ಎಲ್ಲಾ ದೃಷ್ಟಿಯಿಂದ ತನಿಖೆ ನಡೆಸಲಾಗುತ್ತಿದೆ ಮತ್ತು ಮಹಿಳೆಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ ” ಎಂದು ಡಿಸಿಪಿ (ಪೂರ್ವ) ರಾಹುಲ್ ಜೈನ್ ಹೇಳಿದರು.

ಜ್ಯೋತಿ ನಗರ್ ಪೊಲೀಸ್ ಠಾಣೆಯಲ್ಲಿ ಪೇದೆ ಆಗಿದ್ದ ಕಪಿಲ್ ಶರ್ಮಾ ಅತ್ಯಾಚಾರ ಮಾಡಿದ್ದಾನೆ ಎಂದು ರಾಜ್ಯ ಮಾನವ ಹಕ್ಕು ಆಯೋಗ ಅಧಿಕಾರಿಯಾಗಿದ್ದ ದೀಪೇಶ್ ಚತುರ್ವೇದಿಗೆ ದೂರು ನೀಡಿದ್ದೆ. ಈ ದೂರನ್ನು ಪಡೆದ ಚತುರ್ವೇದಿ ಶರ್ಮಾನನ್ನು ಬಂಧಿಸಲಾಗುತ್ತದೆ ಎಂದು ಭರವಸೆ ನೀಡಿದ್ದರು. ಆದರೆ ತನಿಖೆಯಲ್ಲಿ ಯಾವುದೇ ಪ್ರಗತಿ ಕಾಣಲಿಲ್ಲ. ಇದನ್ನು ಪ್ರಶ್ನೆ ಮಾಡಲು ಮಂಗಳವಾರ ದೀಪೇಶ್ ಚತುರ್ವೇದಿ ನಿವಾಸಕ್ಕೆ ಹೋಗಿದ್ದೆ. ಈ ವೇಳೆ ಅಲ್ಲಿ ಐದು ಜನರ ಗುಂಪೊಂದು ನನ್ನ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ ಎಂದು ಮಹಿಳೆ ಪೊಲೀಸರಿಗೆ ವಿಚಾರಣೆಯ ಸಂದರ್ಭದಲ್ಲಿ ತಿಳಿಸಿದ್ದಾಳೆ.

Leave a Reply