ನವದೆಹಲಿ: ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಅಧಿಕಾರ ಬಂದ ನಂತರ ಉತ್ತರ ಪ್ರದೇಶದಲ್ಲಿ ಕೇಸರಿ ಕ್ರಾಂತಿ ಮುಂದುವರಿದಿದೆ. ಸರಕಾರಿ ಕಚೇರಿಗಳಿಗೆ ಕೇಸರಿ ಬಣ್ಣ ಬಳಿಯುತ್ತಿದ್ದು, ಇದೀಗ ಹೊಸ ಬೆಳವಣಿಗೆಯಂತೆ ಹಜ್ ಕಚೇರಿಗಳಿಗೂ ಕೇಸರಿ ಬಣ್ಣವನ್ನು ಹಚ್ಚಲಾಗಿದೆ.

ಹಸಿರು ಹಾಗೂ ಬಿಳಿ ಬಣ್ಣದಲ್ಲಿ ಹಜ್ ಕಚೇರಿಯ ಮುಂಭಾಗದ ಗೋಡೆಗಳಿತ್ತು. ಅದರ ಬದಲಿಗೆ ಕೇಸರಿ ಬಣ್ಣವನ್ನು ಹಚ್ಚಲಾಗಿದೆ. ಕೇಸರೀ ಬಣ್ಣದ ವಿರುದ್ಧ ವಿರೋಧ ಪಕ್ಷಗಳು ಹಾಗೂ ವಿವಿಧ ರಾಜಕೀಯ ಪಕ್ಷಗಳು, ದಾರೂಲ್ ಉಲುಮ್ ಧ್ವನಿ ಎತ್ತಿವೆ.

“ಇದರಲ್ಲಿ ವಿವಾದ ಹುಟ್ಟುಹಾಕುವ ಅಗತ್ಯವಿಲ್ಲ. ಕೇಸರಿ ಶಕ್ತಿಯುತವಾಗಿದ್ದು, ಪ್ರಕಾಶಮಾನವಾದ ಬಣ್ಣವಾಗಿದೆ. ಕಟ್ಟಡಕ್ಕೆ ಕೇಸರಿ ಬಣ್ಣ ನೀಡುವುದರಿಂದ ಚೆನ್ನಾಗಿ ಕಾಣುತ್ತದೆ. ನಮ್ಮ ವಿರುದ್ಧ ದನಿ ಎತ್ತಲು ವಿರೋಧ ಪಕ್ಷಗಳಿಗೆ ಬೇರಾವುದೇ ವಿಚಾರಗಳು ಸಿಗಲಿಲ್ಲ. ಹೀಗಾಗಿ ವಿವಾದವನ್ನು ಸೃಷ್ಟಿಸುತ್ತಿದೆ” ಉತ್ತರಪ್ರದೇಶ ಸಚಿವ ಮೊಹ್ಸಿನ್ ರಾಜಾ ಅಭಿಪ್ರಾಯ ಪಟ್ಟಿದ್ದಾರೆ.

Leave a Reply