ಪರೀಕ್ಷೆ ಬರೆಯಲು ಬರುತ್ತಿದ್ದ ವೇಳೆ ಅಪಘಾತವಾಗಿದ್ದು, ಗ್ಲುಕೋಸ್ ಡಿಪ್ ಹಾಕಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದ ಘಟನೆ ಬಿಹಾರದ ಗುರ್ಮ ಗ್ರಾಮದಲ್ಲಿ ನಡೆದಿದೆ.

ಶ್ವೇತಾ ಕುಮಾರಿ ಅಪಘಾತಕ್ಕೊಳಗಾಗಿ ಪರೀಕ್ಷೆ ವಿದ್ಯಾರ್ಥಿನಿ. ಹತ್ತನೇ ತರಗತಿಯಲ್ಲಿ ಕಲಿಯುತ್ತಿರುವ ಈಕೆ ಬೋರ್ಡ್ ಪರೀಕ್ಷೆ ಬರೆಯಲು ಮೋಹನ್ಪುರದಲ್ಲಿರುವ ಪರೀಕ್ಷಾ ಕೇಂದ್ರಕ್ಕೆ ತೆರಳುತ್ತಿದ್ದಳು. ಆಗ ಅಚಾನಕ್ಕಾಗಿ ಬಂದ ಬುಲೆರೋ ವಾಹನ ಆಕೆಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಆಕೆ ಗಾಯಗೊಂಡಳು.

ಗಾಯಗೊಂಡ ಶ್ವೇತಾ ಕುಮಾರಿಯನ್ನು ಸಹೋದರ ಮತ್ತು ಇತರರ ಸಹಾಯದಿಂದ ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು.

ವೈದ್ಯರು ಚಿಕಿತ್ಸೆ ನೀಡಿದ ಬಳಿಕ ತಾನು ಪರೀಕ್ಷೆ ಬರೆಯಬೇಕು ಎಂದು ಕೇಳಿಕೊಂಡಾಗ ಹೋಗಬೇಕು ಎಂದು ಕೇಳಿಕೊಂಡಿದ್ದಾಳೆ. ಕೊನೆಗೆ ಆಕೆಯ ಒತ್ತಾಯಕ್ಕೆ ಮಣಿದು ಅಂಬುಲೆನ್ಸ್ ಮೂಲಕ ಪರೀಕ್ಷಾ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದು ಅಲ್ಲಿ ಆಕೆ ಪರೀಕ್ಷೆ ಬರೆದಿದ್ದಾಳೆ.

ಸುರಕ್ಷತಾ ಮುಂಜಾಗ್ರತಾ ಕ್ರಮವಾಗಿ ಮೂವರು ಮಹಿಳೆಯರನ್ನು ನಿಯೋಜಿಸಲಾಗಿತ್ತು. ಬ್ಯಾಂಡೇಜ್ ಹಾಕಿ ಪರೀಕ್ಷೆ ಬರೆದ ಈಕೆಯ ಚಿತ್ರ ವೈರಲ್ ಆಗಿದೆ.

Leave a Reply