ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆ ಸೋಲಿನ ಬಗ್ಗೆ ಗೃಹ ಸಚಿವ ಅಮಿತ್ ಶಾ ಮೌನ ಮುರಿದಿದ್ದಾರೆ. ಪ್ರಚಾರದ ಸಂದರ್ಭದಲ್ಲಿ ಬಿಜೆಪಿ ನಾಯಕರು ನೀಡಿದ ಗೋಲಿ ಮಾರೋ, ಭಾರತ-ಪಾಕ್ ದ್ವೇಷಪೂರಿತ ಘೋಷಣೆ ಹೇಳಿಕೆಗಳೇ ಪ್ರಮುಖ ಕಾರಣವಾದವು ಎಂದು ವಿಶ್ಲೇಷಿಸಿದ್ದಾರೆ.

ಟೈಮ್ ನೌ ಸಮ್ಮಿಟ್‌ನಲ್ಲಿ ಮಾತನಾಡಿರುವ ಅವರು, ಈ ರೀತಿಯ ಘೋಷಣೆಗಳು, ಹೇಳಿಕೆಗಳಿಂದ ದೆಹಲಿ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯುಂಟಾಗಿರಬಹುದು ಶಾ ಅಭಿಪ್ರಾಯಪಟ್ಟಿದ್ದಾರೆ. ದೆಹಲಿ ಚುನಾವಣಾ ಫಲಿತಾಂಶ ಸಿಎಎ ಹಾಗೂ ಎನ್ಆರ್ ಸಿ ಕುರಿತ ಜನಾದೇಶವಲ್ಲ. ತಮ್ಮ ಜೊತೆ ಕುರಿತು ಚರ್ಚೆ ನಡೆಸಬೇಕೆಂದಿರುವವರು ತಮ್ಮ ಕಚೇರಿಯನ್ನು ಸಂಪರ್ಕಿಸಿ ಸಮಯವನ್ನು ಕೇಳಬಹುದೆಂದು ಅಮಿತ್ ಶಾ ಮುಕ್ತ ಆಹ್ವಾನ ಕೊಟ್ಟಿದ್ದಾರೆ.

ಬಿಜೆಪಿ ಒಂದು ಸಿದ್ದಾಂತವನ್ನು ಹೊಂದಿರುವ ಪಕ್ಷವಾಗಿದ್ದು, ಸೋಲು-ಗೆಲುವು ಏನೇ ಬಂದರೂ ಪಕ್ಷದ ಸಿದ್ಧಾಂತ ಬದಲಾಗುವುದಿಲ್ಲ. ದೇಶದಲ್ಲಿ ಎದುರಾಗುವ ಚುನಾವಣೆಗಳು ಪಕ್ಷಗಳ ಸಿದ್ದಾಂತವನ್ನು ಪ್ರಚುರಪಡಿಸುವ ವೇದಿಕೆಗಳು ಮಾತ್ರ. ನಾನೊಬ್ಬ ಬಿಜೆಪಿ ಮುಖಂಡನಾಗಿ ಪಕ್ಷದ ಸಿದ್ದಾಂತವನ್ನು ಸಾರಿ ಹೇಳುವ ಕೆಲಸವನ್ನು ನಾನು ಅಚ್ಚುಕಟ್ಟಾಗಿ ಮಾಡಿದ್ದೇನೆ ಎಂದೂ ಶಾ ತಿಳಿಸಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿ ಭಾರತೀಯ ಜನತಾ ಪಕ್ಷ ಕ್ಕೆ ಸೋಲು ಇದೇ ಮೊದಲೇನಲ್ಲ. ಈ ಹಿಂದೆ ಕೂಡಾ ಸಾಕಷ್ಟು ಬಾರಿ ಬಿಜೆಪಿ ಇಲ್ಲಿ ಸೋಲನ್ನು ಕಂಡಿದೆ. ಆಗಲೂ ಕೂಡಾ ಕರ್ತವ್ಯ ನಿರ್ವಹಿಸುವ ವಿಚಾರದಲ್ಲಿ ನಮ್ಮ ಉತ್ಸಾಹ ಯಾವುದೇ ರೀತಿ ಕುಗ್ಗುವುದಿಲ್ಲ. ನಮಗೆ ಚುನಾವಣೆ ನಮ್ಮ ಸಿದ್ಧಾಂತವನ್ನು ಪ್ರಚುರ ಪಡಿಸುವ ಮಾರ್ಗವಾಗಿದೆ, ಸೋಲು ಗೆಲುವಿಗಾಗಿ ನಾವು ಚುನಾವಣೆ ಸ್ಪರ್ಧಿಸುವುದಿಲ್ಲ. ಸೋಲು ಗೆಲುವು ಚುನಾವಣೆಯಲ್ಲಿ ಮುಖ್ಯ ಎಂದು ಸಚಿವ ಅಮಿತ್ ಶಾ ತಿಳಿಸಿದರು.

ದೆಹಲಿ ಚುನಾವಣೆ ಸಿದ್ಧಾಂತದ ಸೋಲು ಎಂದು ನಿಮಗೆ ಅನ್ನಿಸುವುದಿಲ್ಲವೇ?

ಅಮಿತ್ ಶಾ : ಹಾಗೇನಿಲ್ಲ ಕೇಜ್ರಿವಾಲ್ ರಿಗೆ ಲೋಕ ಸಭೆಯಲ್ಲಿ ಮೂರನೇ ಸ್ಥಾನ ಸಿಕ್ಕಿದೆ. ಇದರಿಂದ ಜನರು ಅವರನ್ನು ತಿರಸ್ಕರಿಸಿದ್ದಾರೆ ಎಂದರ್ಥ ಅಲ್ಲ. ಚುನಾವಣೆಯಲ್ಲಿ ಬಹಳಷ್ಟು ವಿಷಯಗಳು ಮುಂದೆ ಬರುತ್ತದೆ. ಅದರಲ್ಲಿ ಸಿದ್ದಂತವೂ ಒಂದು. ನಾನು ನನ್ನ ಸಿದ್ದಾಂತವನ್ನು ಜನರಿಗೆ ತಲಪಿಸುವ ಪ್ರಯತ್ನ ಮಾಡಿದ್ದೇನೆ. ಚುನಾವಣೆ ಒಂದು ಅವಕಾಶ. ನಾವು ಪಕ್ಷ ಪ್ರಾರಂಭವಾದಂದಿನಿಂದ ಚುನಾವಣೆಯಲ್ಲಿ ಸಾಕಷ್ಟು ಬಾರಿ ಸೋತಿದ್ದೇವೆ, ಆಗಲೂ ನಾವು ಆರ್ಟಿಕಲ್ ೩೭೦ ಹೋಗಬೇಕು ಎಂದು ನಾವು ಪ್ರತಿಪಾದಿಸಿದ್ದೆವು, ಈಗಲೂ ಪ್ರತಿಪಾದಿಸುತ್ತಿದ್ದೇವೆ.

ಚುನಾವಣೆಗೆ ಒಂದು ದಿನ ಮುಂಚೆ ನೀವು ೪೫ ಸೀಟು ಗೆಲ್ಲುತ್ತಿರಿ ಎಂದು ಟ್ವೀಟ್ ಮಾಡಿದ್ದೀರಿ, ಜನರನ್ನು ಅರ್ಥ ಮಾಡುವಲ್ಲಿ ಎಡವಿದ್ದೀರಾ?

ಅಮಿತ್ ಶಾ : ಹಾಗೇನಿಲ್ಲ, ನನ್ನ ಮೌಲ್ಯಮಾಪನ (assessment) ಜನರ ಮುಂದೆ ಇಟ್ಟಿದ್ದೇನೆ. ಅದು ತಪ್ಪಾಗಿತ್ತು. ವ್ಯಕ್ತಿಯ assessment ಸರಿ ತಪ್ಪಾಗಲು ಸಾಧ್ಯವಿದೆ. ನನ್ನ ಹಲವು ಮೌಲ್ಯಮಾಪನ ಈ ಹಿಂದೆ ಸರಿಯಾಗಿದೆ. ಇದು ತಪ್ಪಾಗಿತ್ತು ಅದನ್ನು ನಾನು ಒಪ್ಪಿಕೊಳ್ಳುತ್ತೇನೆ.

ಈ ಫಲಿತಾಂಶ ಶಾಹೀನ್ ಬಾಗ್ ಗೆ ಸಮರ್ಥನೆ ನೀಡುತ್ತಿಲ್ಲವೇ?

ಅಮಿತ್ ಶಾ : ನೋಡಿ, ಚುನಾವಣೆ ಒಂದು ವಿಷಯದ ಮೇಲೆ ನಡೆಯಲ್ಲ. ಇದೂ ಒಂದು ವಿಷಯ ಆಗಿತ್ತು. ನಿಜವಾಗಿ ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಹೇಗೆ ಯಾಕೆ ಯಾವ ಸ್ವರೂಪದಲ್ಲಿ ನಡೆಯಬೇಕು ಎಂಬುದು ಚರ್ಚೆಯಾಗಿದೆ. ಇದರಲ್ಲಿ ಎಲ್ಲರಿಗೂ ಅವರವರ ವಿಚಾರಧಾರೆ ಹೇಳುವ ಅಧಿಕಾರ ಇದೆ. ನಮಗೂ ಇದೆ.

ಇವಿಯಂ ಬಟನ್ ಒತ್ತಿದರೆ ಶಾಹೀನ್ ಬಾಗ್ ಗೆ ಶಾಕ್ ಹೊಡೆಯುತ್ತದೆ ಎಂದು ತಾವು ಹೇಳಿದ್ದೀರಿ?

ಅಮಿತ್ ಶಾ : ನನ್ನ ಇಡೀ ಚುನಾವಣಾ ಅಭಿಯಾನದಲ್ಲಿ ವಿಪಕ್ಷಗಳಿಗೆ ಇದೇ ಒಂದು ವಾಕ್ಯ ಸಿಕ್ಕಿದೆ. ಕರೆಂಟ್ ನಿಜವಾಗಿ ಯಾರಿಗೂ ಹೊಡೆಯಲ್ಲ. ಇದು ಒಂದು ಸಾಂಕೇತಿಕವಾಗಿದೆ.

ಗೋಲಿ ಮಾರೋ, ಭಾರತ-ಪಾಕ್ ಪಂದ್ಯ, ಶಾಹೀನ್ ಬಾಗ್ ನಲ್ಲಿ ಮನೆಗೆ ನುಗ್ಗಿ ಅತ್ಯಾಚಾರ ಮಾಡುವೆವು ಮುಂತಾದ ದ್ವೇಷಪೂರಿತ ಘೋಷಣೆ ಹೇಳಿಕೆಗಳೇ ನಿಮ್ಮ ಸೋಲಿಗೆ ಕಾರಣವೇ?

ಅಮಿತ್ ಶಾ :ಮನೆಗೆ ನುಗ್ಗಿ ಅತ್ಯಾಚಾರ ಮಾಡುವೆವು ಎಂಬ ಘೋಷಣೆ ಯಾರೂ ನೀಡಿಲ್ಲ. ಇತರ ಹೇಳಿಕೆಗಳನ್ನು ಪಕ್ಷ ಕೂಡಲೇ ಖಂಡಿಸಿದೆ. ನೋಡಿ ಪಕ್ಷದಲ್ಲಿ ವಿವಿಧ ಸ್ಥರದಲ್ಲಿ ಜನರು ಮುಂದೆ ಬರುತ್ತಾರೆ. ಆದರೆ ಎಲ್ಲರೂ ಚುನಾವಣಾ ಮೈದಾನದಲ್ಲಿ ಇರುತ್ತಾರೆ. ಆದರೆ ನಿಜವಾಗಿ ಪಕ್ಷದ ಹೇಳಿಕೆಗಳು ಪಕ್ಷದ ಅಧಿಕೃತ ವಕ್ತಾರರು, ಬೋರ್ಡ್ ನಿಂದ ಬರುತ್ತದೆ ಎಂಬುದು ಎಲ್ಲರಿಗೂ ತಿಳಿದಿದೆ. ಈ ಹೇಳಿಕೆಗಳಿಗೆ ಹೊರತಾಗಿ ಯಾವುದೇ ದೊಡ್ಡ ವ್ಯಕ್ತಿಯ ಹೇಳಿಕೆಯೂ ನಮ್ಮ ವಿಚಾರಧಾರೆಯಲ್ಲ. ಆದ್ದರಿಂದ ಸೋಲಿಗೆ ಇದರ ಪರಿಣಾಮವೂ ಆಗಿರಬಹುದು.

ಪೂರ್ಣ ಸಂದರ್ಶನ ಕೆಳಗೆ ವಿಡಿಯೋ ನೋಡಿ

 

Leave a Reply