ವಾಟ್ಸಾಪ್ ಸೋಷಿಯಲ್ ಮೀಡಿಯಾದಲ್ಲಿ ಮತ್ತೆ ವೈರಲ್ ಆಗುತ್ತಿದೆ ಈ ಮೆಸೇಜ್

ಒಬ್ಬ ವ್ಯಕ್ತಿಗೆ ಇದ್ದಕಿದ್ದ ಹಾಗೆ ಎದೆಯಲ್ಲಿ ನೋವು ಕಾಣಲು ಶುರುವಾಯಿತು. ಅವನು ತಕ್ಷಣವೇ ಫ್ಯಾಮಿಲಿ ಡಾಕ್ಟರ್ ಹತ್ತಿರ ಹೋದ.
ಅವರು ಎಕ್ಸ್’ರೇ ತೆಗೆದು ನೋಡಿದರು. ಅವನ ಎದೆಯ ಒಳಗೆ ಒಂದು ಹೆಕ್ಕಳೆ (Cockrach) ಇತ್ತು. ಡಾಕ್ಟರ್ ಹೇಳಿದರು….. ಇದಕ್ಕೆ ಒಂದು ಆಪರೇಷನ್ ಆಗಬೇಕು. ಅದು ಭಾರತದಲ್ಲಿ ಆಗುವುದಿಲ್ಲ. ಸಿಂಗಾಪುರದಲ್ಲಿ ನನ್ನ ಪರಿಚಯದ ಡಾಕ್ಟ್ರ ಒಬ್ಬರು ಇದ್ದಾರೆ. ಅಲ್ಲಿಗೆ ಹೋಗು. ಎಂದು ಹೇಳಿ ಒಂದು ಚೀಟಿ ಬರೆದು ಕೊಟ್ಟರು.

ಸಾಯುವವರೆಗೆ ಬದುಕಬೇಕು ಎಂಬ ಆಸೆ ಯಾರಿಗಿಲ್ಲ ಹೇಳಿ…?

ಆ ವ್ಯಕ್ತಿ ಜೀವವನ್ನು ಕೈಯಲ್ಲಿ ಹಿಡಿದು ಕೊಂಡು ಸಿಂಗಾಪುರಕ್ಕೆ ಓಡಿದ. ಸಿಂಗಾಪುರದ ಡಾಕ್ಟ್ರ ಇವನು ಭಾರತದಿಂದ ತೆಗೆದು ಕೊಂಡು ಹೋಗಿದ್ದ ಎಕ್ಸ್’ರೆ ಯನ್ನು ಪರೀಕ್ಷೆ ಮಾಡಿದರು.
ಅವರಿಗೆ ಯಾಕೋ ಅನುಮಾನ ಬಂತು. ಬೇರೆ ಎಕ್ಸ್’ರೇ ತೆಗೆಸುವಂತೆ ಹೇಳಿದರು. ಅವನು ಬೇರೆ ಎಕ್ಸ್’ರೇ ತೆಗೆಸಿ ಅವರಲ್ಲಿ ಕೊಟ್ಟ ಮತ್ತೊಮ್ಮೆ ಪರೀಕ್ಷಿಸಿದ ಡಾಕ್ಟರ್ ನಗುತ್ತಾ….. ನಿನಗೆ ಇರುವುದು ಎಸಿಡಿಟಿ ಪ್ರಾಬ್ಲೇಮ್ ಅಷ್ಟೆ. !!
ಹೆಕ್ಕಳೆ ಇದ್ದದ್ದು ನಿನ್ನ ಎದೆಯೊಳಗೆ ಅಲ್ಲ.
ಅದು ನೀನು ಎಕ್ಸ್’ರೇ ತೆಗೆದ ಮಿಶನ್ನಿನ ಒಳಗೆ ಇತ್ತು ಅಂದರು. ಪಾಪ…. ಒಂದು ಹೆಕ್ಕಳೆಯಿಂದಾಗಿ ಅವನಿಗೆ ಸಾವಿರಾರು ರೂಪಾಯಿ ಖರ್ಚಾಯಿತು ಅನ್ನಿ.

ಈ ಸುದ್ದಿಯ ಅಸಲಿಯತ್ತು ಏನು?

xray ಯಲ್ಲಿ ಜಿರಳೆ ತೋರಿಸುವ ಚಿತ್ರವೊಂದನ್ನು 10 ಏಪ್ರಿಲ್ 2017 ರಂದು “ಲೆಟ್ಸ್ ಎಂಜಾಯ್ ಜಿಂಬಾಬ್ವೆ” ಎಂಬ ಫೇಸ್‌ಬುಕ್ ಪುಟ ಹಂಚಿಕೊಂಡಿದೆ. ಜಿಂಬಾಬ್ವೆಯ ರುಸೇಪ್ ಜನರಲ್ ಆಸ್ಪತ್ರೆಯಲ್ಲಿ ಈ ಭಯಂಕರ ಆವಿಷ್ಕಾರ ಮಾಡಲಾಗಿದೆ ಎಂಬ ಶೀರ್ಷಿಕೆಯನ್ನೂ ನೀಡಲಾಗಿತ್ತು. ಮಾತ್ರವಲ್ಲ ಮೇಲೆ ಹೇಳಿದ ಕಥೆಯನ್ನು ಈ ಜಿಂಬಾಬ್ವೆ ರೋಗಿಯೊಂದಿಗೆ ಹಣೆಯಲಾಗಿತ್ತು. ಈ ಕಥೆ ಮತ್ತು ಚಿತ್ರ ಎರಡೂ ಫೇಕ್ ಆಗಿದೆ ಎಂದು ಮತ್ತೆ ಸ್ಪಷ್ಟ ಪಡಿಸಲಾಗಿತ್ತು. ಮಾತ್ರವಲ್ಲ ಮತ್ತೆ ಮತ್ತೆ ಈ ಫೋಟೋ ವಿವಿಧ ಜೋಕ್ಸ್ ಮತ್ತು ಕಥೆಗಳೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.

Leave a Reply