ಚಲನಚಿತ್ರ ವಿಶ್ವ ಕಂಡ ಮಹಾನ್ ನಟ, ನಿರ್ದೇಶಕ, ನಿರ್ಮಾಪಕ ಮತ್ತು ಸಂಭಾಷಣೆಕಾರ. ಹಾಸ್ಯ ಪಾತ್ರಗಳಲ್ಲಿ ಚಾರ್ಲಿನ್ ಹುಟ್ಟಿಸಿದ ನಗೆ, ಆ ನಗೆಯ ಅಂತರಾಳದಲ್ಲಿ ಈ ವಿಶ್ವದ ಜನರ ಅದರಲ್ಲೂ ಬಡ ಮತ್ತು ಶೋಷಿತ ಜನಾಂಗದ ಕುರಿತಾಗಿ ಆತ ಮೂಡಿಸಿದ ಕಾಳಜಿಗಳು ಅಪ್ರತಿಮವಾದದ್ದು.
ಚಾರ್ಲಿ ಚಾಪ್ಲಿನ್ ಹುಟ್ಟಿದ ದಿನ ಏಪ್ರಿಲ್ 16,1889. ಚಾಪ್ಲಿನ್ ಚಿತ್ರಗಳನ್ನು ಆಸ್ವಾದಿಸಿದ ನಮಗೆ ಚಾಪ್ಲಿನ್ನನಷ್ಟು ಆತ್ಮೀಯರು ಮತ್ತೊಬ್ಬರಿದ್ದಾರೆಯೇ ಎನಿಸುತ್ತದೆ. ಇಡೀ ವಿಶ್ವಕ್ಕೆ ಸಂತೋಷ ಕೊಟ್ಟ ಅಪರೂಪದ ವ್ಯಕ್ತಿ ಆತ. ಚಾಪ್ಲಿನ್ನನಿಗೆ ಹೇಳಬೇಕೆನಿಸುತ್ತಿದೆ “ಚಾಪ್ಲಿನ್ ನೀನು ಯಾವ ಲೋಕದಲ್ಲಿದ್ದರೂ ಅಲ್ಲಿನ ಜನರನ್ನು ಸಂತೋಷವಾಗಿ ಇಟ್ಟಿರುವೆ!