Photo credit : The Hans India

ಶಿಕ್ಷಣ ಪಡೆದ ಬಳಿಕ ಉದ್ಯೋಗಕ್ಕಾಗಿ ಅಲೆದಾಟ ಆರಂಭವಾಗುತ್ತದೆ. ಉದ್ಯೋಗಕ್ಕಾಗಿ ಸಂದರ್ಶನವನ್ನು ಎದುರಿಸುವಾಗ ಗಮನಿಸಬೇಕಾದ ಅಂಶಗಳು.

* ಉದ್ಯೋಗ ಬಯಸಿದ ಕಂಪೆನಿಯ ಅಥವಾ ಸಂಸ್ಥೆಯ ಕುರಿತು ಚೆನ್ನಾಗಿ ತಿಳಿದಿರಲಿ.

* ನಿಮ್ಮ ವಸ್ತ್ರವು ವ್ಯಕ್ತಿತ್ವವನ್ನು ಪ್ರತಿಫಲಿಸುತ್ತದೆ. ಆದ್ದರಿಂದ ಸಾಮಾನ್ಯ ವಸ್ತ್ರವನ್ನು ಧರಿಸಿ. ಸನ್‍ಗ್ಲಾಸ್, ಟೋಪಿ, ಹ್ಯಾಟ್ ಧರಿಸಬೇಡಿ.

* ಸಂದರ್ಶನ ನಡೆಸುವವರ ಮುಖವನ್ನೇ ನೋಡಿ ಮಾತನಾಡಿ. ಇತರೆಡೆಗಳಿಗೆ ನೋಡುತ್ತಾ, ಅಥವಾ ಉದಾ ಸೀನದ ನೋಟದಿಂದ ಮಾತನಾಡಿದರೆ ನಿಮಗೆ ಆತ್ಮವಿಶ್ವಾಸ ವಿಲ್ಲವೆಂದು ತಿಳಿಯುತ್ತಾರೆ.

* ಆತ್ಮವಿಶ್ವಾಸದಿಂದ ಶರೀರವನ್ನು ರಿಲ್ಯಾಕ್ಸ್ ಮಾಡಿ ನೆಟ್ಟಗೆ ಕುಳಿತುಕೊಳ್ಳಿ. ಅತಿಯಾದ ಮುಖಚೇಷ್ಟೆ ಒಳ್ಳೆಯದಲ್ಲ.

* ಕೈಯನ್ನು ಮೇಜಿನ ಮೇಲಿಟ್ಟು ಮಡಿಲಲ್ಲಿ ಇಟ್ಟು ಮಾತನಾಡಿ. ಅಮಿತ ಕೈಚಲನೆ, ಬೆರಳುಗಳನ್ನು ಜೋಡಿಸಿ ಕೊಳ್ಳುವುದು ಮಾಡಬೇಡಿ. ಕೈ ತೋರಿಸಿ ಮಾತನಾಡಬೇಡಿ.

* ಸಂದರ್ಶನ ನಡೆಸುತ್ತಿರುವಾಗ ಮೊಬೈಲ್ ಫೋನ್ , ವಾಚುಗಳನ್ನು ನೋಡುತ್ತಿರುವುದು, ಚ್ಯೂಯಿಂಗ್‍ಗಮ್ ಜಗಿಯುವುದು, ಕರ್ಚೀಫ್‍ನಿಂದ ಆಗಾಗ ಮುಖ ಒರೆಸು ವುದು… ಮಾಡುತ್ತ ಇರಬೇಡಿ. ಮೊಬೈಲ್ ಫೋನನ್ನು ಸ್ವಿಚ್ ಆಫ್ ಮಾಡಿ ಇಡಬೇಕು.

* ನಿಮ್ಮ ಸರ್ಟಿಫಿಕೇಟ್‍ಗಳು, ಇತರ ದಾಖಲೆ ಪತ್ರ ಗಳನ್ನು ಫೈಲ್‍ನಲ್ಲಿ ಕ್ರಮೀಕರಿಸಿ ಇಟ್ಟುಕೊಳ್ಳಿ.

* ಸಮಯದಲ್ಲಿ ಕ್ಲಪ್ತತೆ ಪಾಲಿಸಿರಿ. ಸಂದರ್ಶನ ಆರಂಭವಾಗುವುದಕ್ಕಿಂತ 10-15 ನಿಮಿಷ ಮೊದಲೇ ಸ್ಥಳಕ್ಕೆ ತಲುಪಬೇಕು.

* ಸಂದರ್ಶಕರ ಪ್ರಶ್ನೆಗಳನ್ನು ಸರಿಯಾಗಿ ಅರ್ಥೈಸಿಕೊಂಡು, ಸೂಕ್ತ ಹಾಗೂ ಸಂಕ್ಷಿಪ್ತವಾಗಿ ಉತ್ತರಿಸಿ. ಗಡಿಬಿಡಿಯಿಂದ ವೇಗವಾಗಿ ಮಾತನಾಡಬೇಡಿ. ವ್ಯಕ್ತಿ ಪರವಾದ ಪ್ರಶ್ನೆಗಳಿಗೆ ನಿಜ ಉತ್ತರಗಳನ್ನೇ ನೀಡಿರಿ.

* ಸಂದರ್ಶನಕ್ಕೆ ಹೋಗುವ ಸ್ವಲ್ಪ ಮೊದಲು ಧೂಮಪಾನ ಮಾಡಬಾರದು. ಹೆಚ್ಚು ಪರಿಮಳವಿರುವ ಸುಗಂಧದ್ರವ್ಯಗಳು, ಆಫ್ಟರ್‍ಶೇವ್‍ಗಳನ್ನು ಉಪಯೋಗಿಸಬೇಡಿ.

Leave a Reply