ಬೇಕಾಗುವ ಸಾಮಗ್ರಿಗಳು:

ಕೋಳಿಯ ಎದೆಯ ತುಂಡುಗಳು- 2, ಲಿಂಬೆರಸ- 1/4 ಕಪ್, ಬೆಳ್ಳುಳ್ಳಿ ಪೇಸ್ಟ್- 2 ಸ್ಪೂ., ಮೊಸರು- 4 ದೊಡ್ಡ ಸ್ಪೂ., ಆಲಿವ್
ಎಣ್ಣೆ- 2 ಟೀ ಸ್ಪೂ., ಕರಿಮೆಣಸಿನ ಹುಡಿ- 2 ಟೀ ಸ್ಪೂ., ತಾವ್ರಿಕ ಹುಡಿ- 1/4 ಟೀ ಸ್ಪೂ., ಟೊಮೆಟೊ ಪೇಸ್ಟ್- 1 ಸ್ಪೂ.,
ಅರೇಬಿಕ್ ಸ್ಪೈಸ್ (ಗರಮ್ ಮಸಾಲ)- 1 ಸ್ಪೂ, ಸಣ್ಣ ಜೀರಿಗೆ ಹುಡಿ- 1/4 ಸ್ಪೂ., ಉಪ್ಪು.

ತಯಾರಿಸುವ ವಿಧಾನ:

ಕೋಳಿಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ. ಉಳಿದ ಎಲ್ಲಾ ಮಸಾಲೆ ಸಾಮಗ್ರಿಗಳನ್ನು ಮಿಕ್ಸ್ ಮಾಡಿ. ಈ ಚಿಕನ್ ತುಂಡುಗಳಿಗೆ ಹರಡಿ. ಇದನ್ನು ನಾಲ್ಕು ಗಂಟೆ ಹಾಗೆಯೇ ಫ್ರಿಜ್ಜ್‍ನಲ್ಲಿಟ್ಟು ಬಿಡಿ. ಓವನ್ ಫ್ರೀಹೀಟ್ ಮಾಡಿ. 180 ಡಿಗ್ರಿಯಲ್ಲಿ 15-20 ನಿಮಿಷ ಬೇಕ್/ಗ್ರಿಲ್ ಮಾಡಿ ತೆಗೆಯಿರಿ. ತವಾ ಗ್ರಿಲ್‍ನಲ್ಲೂ ಹುರಿದು ತೆಗೆಯಬಹುದು. ಗಾರ್ಲಿಕ್ ಸಾಸ್‍ನೊಂದಿಗೆ ಸವಿಯಿರಿ. ಕುಬ್ಬೂಸನ್ನು ಸ್ಯಾಂಡ್‍ವಿಚ್ ಮಾಡಿ ತಿನ್ನುವಾಗಲೂ ಇದನ್ನು ಸೇರಿಸಿದರೆ ಚೆನ್ನಾಗಿರುತ್ತದೆ

Leave a Reply