ಇದುನಮ್ಮಊರು : ನವಾಜುದ್ದೀನ್ ಸಿದ್ದಿಕಿ ಪ್ರತಿಭಾವಂತ ನಟರಲ್ಲೊಬ್ಬರು. ಅವರು ಎಲ್ಲಾ ರೀತಿಯ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಠಾಕ್ರೆ ಮತ್ತು ಮಾಂಟೊರಂತಹ ಬಯೋಪಿಕ್ಸ್‌ನಲ್ಲೂ ಕೆಲಸ ಮಾಡಿದ್ದಾರೆ.
ಮಸಾಲ ಸಿನೆಮಾ ಮಾಡುವುದರ ಬಗ್ಗೆ ಪ್ರತಿಕ್ರಿಯೆ ನೀಡಿದನವಾಜುದ್ದೀನ್ , ‘ ನಾನು ಹಣಕ್ಕಾಗಿ ಚಲನಚಿತ್ರಗಳಲ್ಲಿ ನಟಿಸುತ್ತೇನೆ ಮತ್ತು ಅದನ್ನು ಮುಂದುವರೆಸುತ್ತೇನೆ. ಒಂದು ವೇಳೆ ಹಣ ಸಿಗದ ಸಿನೆಮಾಗಳಿಗೆ ನಾನು ಸಂಭಾವನೆ ಪಡೆಯುವುದಿಲ್ಲ. ಮಾಂಟೋ ಚಿತ್ರಕ್ಕಾಗಿ ನಾನು ಹಣವನ್ನು ತೆಗೆದುಕೊಳ್ಳಲಿಲ್ಲ, ಆದರೆ ಸಮತೋಲನ ಕಾಪಾಡಿಕೊಳ್ಳಬೇಕಾದರೆ ಹಣ ಸಿಗುವ ಸಿನೆಮಾಗಳನ್ನು ಮಾಡಬೇಕಾಗುತ್ತದೆ ಎಂದು ಹೇಳಿದರು.
ನೀವು ನಟನೆ ಬಗ್ಗೆ ಮಾತನಾಡಿ, ಒಳ್ಳೆಯ ನಟ ಎಲ್ಲೆಡೆ ಒಳ್ಳೆಯವನಾಗಿರುತ್ತಾನೆ. ಪ್ರತಿಯೊಂದು ನಟನೆಯನ್ನು ಅದರದೇ ಆದ ಶೈಲಿಯಲ್ಲಿ ಮಾಡಬೇಕಾಗುತ್ತದೆ. ನಾನು ನಟನೆಯನ್ನು ಇಷ್ಟಪಡುತ್ತೇನೆ. ನಾನು ಪ್ರತಿ ಚಿತ್ರದಲ್ಲೂ ಹೊಸ ವಿಷಯಗಳನ್ನು ಕಲಿಯುತ್ತೇನೆ. ಆದ್ದರಿಂದ ಅದನ್ನು ವರ್ಗೀಕರಿಸಿ ನೋಡಬಾರದು ಎಂದು ಹೇಳಿದ್ದಾರೆ.