ಸೋಶಿಯಲ್ ಮೀಡಿಯಾ ದಲ್ಲಿ ಕೋತಿಯ ವಿಡಿಯೋವೊಂದು ವೈರಲ್ ಆಗಿದೆ. ಈ ವಿಡಿಯೋ ನೋಡಿ ಜನರು ಭಾವುಕರಾಗುತ್ತಿದ್ದಾರೆ. ಕೋತಿಯೊಂದಕ್ಕೆ ಗಾಯವಾಗಿದ್ದು ಇನ್ನೊಂದು ಕೋತಿ ಅದನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ದಿದೆ. ಈ ವಿಡಿಯೋ ಸಾಮಾಜಿಕ ಮಾಧ್ಯಮ ಟ್ವಿಟರ್ ಫೇಸ್ಬುಕ್ ಹಾಗೂ ಇತರ ಮಾಧ್ಯಮಗಳಲ್ಲಿ ಸಾಕಷ್ಟು ವೈರಲ್ ಆಗಿದೆ.

ಪ್ರವಾಸ ತಾಣಕ್ಕೆ ಹೋಗುವಾಗ ಹಿಂಡಿನಲ್ಲಿ ಮಂಗಗಳನ್ನು ನೀವು ನೋಡಿರಬಹುದು, ಅವು ಜನರೊಂದಿಗೆ ಸಂವಹನ ನಡೆಸುತ್ತದೆ. ಆಹಾರಕ್ಕಾಗಿ ಅಂಗಲಾಚುತ್ತದೆ. ಕಣ್ಣು ಮಿಟುಕಿಸಿ ನೋಡುತ್ತದೆ. ಕೆಲವೊಮ್ಮೆ ಅದರ ಚೇಷ್ಟೆಗೆ ಜನರು ಗಾಬರಿ ಗೊಳ್ಳುತ್ತಾರೆ. ಕೆಲವೊಮ್ಮೆ ಮಂಗಗಳಿಗೆ ಕಲ್ಲು ಬಿಸಾಡುವುದರಿಂದ ಅವುಗಳು ಹಲವು ಬಾರಿ ಗಾಯಗೊಳ್ಳುತ್ತವೆ. ಬಿಹಾರದ ಸಸಾರಾಮ್‌ನಿಂದ ಇತ್ತೀಚಿನ ದಿನಗಳಲ್ಲಿ ಕೋತಿಯೊಂದು ಗಾಯಗೊಂಡಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ. ಯಾರೋ ಆ ಕೋತಿಯ ಮೇಲೆ ಇಟ್ಟಿಗೆ ಮತ್ತು ಕಲ್ಲುಗಳಿಂದ ದಾಳಿ ಮಾಡಿದ್ದು, ಅದರಿಂದ ಅದು ಗಾಯಗೊಂಡಿತ್ತು.. .

ವೈದ್ಯರಿಂದ ಕೋತಿ ಹೇಗೆ ಚಿಕಿತ್ಸೆ ಪಡೆಯುತ್ತಿದೆ ಎಂಬುದನ್ನು ವೀಡಿಯೊದಲ್ಲಿ ನೀವು ನೋಡಬಹುದು. ವೈದ್ಯರು ಚಿಕಿತ್ಸೆ ನೀಡುತ್ತಿರುವಾಗ ಕೋತಿ ಬೆಂಚ್ ಮೇಲೆ ಆರಾಮವಾಗಿ ಕುಳಿತಿದೆ. ಇಟ್ಟಿಗೆ ಮತ್ತು ಕಲ್ಲುಗಳಿಂದ ಹಲ್ಲೆ ನಡೆಸಿದ ಪರಿಣಾಮವಾಗಿ ಕೋತಿ ಗಂಭೀರವಾಗಿ ಗಾಯಗೊಂಡಿದೆ ಎಂದು ವೈದ್ಯರು ತಿಳಿಸಿದ್ದಾರೆ. ಮೊದಮೊದಲು ನಾನೂ ಕೂಡ ನರ್ವಸ್ ಆಗಿದ್ದೆ, ನೋವಿನಿಂದ ಮಂಗ ಶಬ್ದಗಳನ್ನು ಮಾಡಲಾರಂಭಿಸಿತು ಎಂದು ವೈದ್ಯರು ಹೇಳಿದರು. ನಂತರ ಚಿಕಿತ್ಸೆ ನೀಡಿ ಕ್ಲಿನಿಕ್ ಒಳಗೆ ವಿಶ್ರಾಂತಿಗೆ ಅವಕಾಶ ನೀಡಿದ್ದೆ. ಈ ಭಾವನಾತ್ಮಕ ವಿಡಿಯೋವನ್ನು ಇದುವರೆಗೆ ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ.

Leave a Reply