ನಾಗಾಲ್ಯಾಂಡ್‌ನ ವೀಡಿಯೊ ಅಂತರ್ಜಾಲದಲ್ಲಿ ತುಂಬಾ ವೈರಲ್ ಆಗಿದೆ. ಒಗ್ಗಟ್ಟಿನಲ್ಲಿ‌ ಬಲವಿದೆ ಎಂಬ ಗಾದೆ ಈ ವೀಡಿಯೊವನ್ನು ನೋಡುವಾಗ ನೆನಪಿಗೆ ಬರುತ್ತದೆ. ಭಾರತೀಯ ಅರಣ್ಯ ಸೇವಾ ಅಧಿಕಾರಿ ಸುಧಾ ರಾಮೆನ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಕಿರು ಕ್ಲಿಪ್ ಹಂಚಿಕೊಂಡಿದ್ದು, ಈ ವಿಡಿಯೋವನ್ನು ಜನರು ತುಂಬಾ ಮೆಚ್ಚಿ ಕೊಂಡಿದ್ದಾರೆ.

ವೀಡಿಯೊದಲ್ಲಿ ಕಾಣುವಂತೆ, ನಾಗಾಲ್ಯಾಂಡ್‌ನ ಹಳ್ಳಿಯ ನೂರಾರು ಸ್ಥಳೀಯರು ಕಲ್ಲಿನ ಗುಡಿಸಲನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವರ್ಗಾಯಿಸಿದರು. ಗುಂಪಿನ ಜನರು ಮನೆಯ ನಾಲ್ಕು ಮೂಲೆಗಳನ್ನು ಹಿಡಿದು ಬೆಟ್ಟದ ಹಾದಿಯಲ್ಲಿ ನಡೆದು ಗುಡಿಸಲನ್ನು ಅದರ ಮೂಲ ಸ್ಥಳದಿಂದ ಹೊಸ ಸ್ಥಳಕ್ಕೆ ಸ್ಥಳಾಂತರಿಸುತ್ತಾರೆ.

ವಿಡಿಯೋ ನೋಡಿ…

Leave a Reply