ಬಲಸೋರ್ : ಒಡಿಸ್ಸಾದ ಬಲಸೋರಿನ ಒಂದು ಗ್ರಾಮದಲ್ಲಿ ರವಿವಾರ ಹಳದಿ ಬಣ್ಣದ ಆಮೆಯು ಕಂಡು ಬಂದಿದೆ. ಗ್ರಾಮೀಣರು ಕುತೂಹಲಗೊಂಡು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ ಅಪೂರ್ವವಾಗಿ ಮಾತ್ರ ಈ ಬಣ್ಣದ ಆಮೆ ಕಂಡು ಬರುತ್ತದೆ ಎಂದು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳಲ್ಲಿ ಒಬ್ಬರು ಹೇಳಿದ್ದಾರೆ.

ಆಮೆಯ ಕಾಲು ದೇಹ ತಲೆ ಎಲ್ಲ ಹಳದಿಯೇ ಹಳದಿ ಬಣ್ಣವಾಗಿದೆ. ಚಿಪ್ಪು ಮಾತ್ರ ಹಳದಿಯಾಗಿರುವ ಆಮೆ ಕಾಣಸಿಕ್ಕರೂ ಎಲ್ಲವೂ ಹಳದಿಯಾದ ಆಮೆ ಕಾಣುವುದು ಬಹಳ ಅಪರೂಪ ಎಂದು ಅಧಿಕಾರಿ ಬಹಿರಂಗಪಡಿಸಿದ್ದಾರೆ.

ಭಾರತದ ಫಾರೆಸ್ಟ್ ಸರ್ವಿಸ್ ಅಧಿಕಾರಿ ಸುಶಾಮತ್ ಶರ್ಮ ಹಳದಿ ಆಮೆಯ ವೀಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ಹಳದಿ ಬಣ್ಣದ ಆಮೆಯನ್ನು ಮೊದಲ ಬಾರಿ ನೋಡಿದೆ ಎಂದು ಹಲವರು ಕಮೆಂಟು ಮಾಡಿ ವೀಡಿಯೊ ಶೇರ್ ಮಾಡಿದ್ದಾರೆ.

LEAVE A REPLY

Please enter your comment!
Please enter your name here