ಮಂಗಳೂರು: ಪೀಸ್ ಅಂಡ್ ಅವೇರ್ನೆಸ್ ಟ್ರಸ್ಟ್ (ರಿ) ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ) ಇದರ ಜಂಟಿ ಆಶ್ರಯದಲ್ಲಿ ಯೇನಪೋಯ ಮೆಡಿಕಲ್ ಕಾಲೇಜು ದೇರಳಕಟ್ಟೆ ಇದರ ಸಹಯೋಗದಲ್ಲಿ ಬೃಹತ್ ಸಾರ್ವಜನಿಕ ರಕ್ತದಾನ ಶಿಬಿರವು ದಿನಾಂಕ 25 ಫೆಬ್ರವರಿ 2018 ನೇ ಭಾನುವಾರದಂದು ಬಣಕಲ್ ರಿವರ್ ವ್ಯೂವ್ ಆಂಗ್ಲ ಮಾಧ್ಯಮ ಶಾಲೆಯ ವಠಾರದಲ್ಲಿ ನಡೆಯಿತು.

ಪೀಸ್ & ಅವೆರ್ನೆಸ್ ಟ್ರಸ್ಟಿನ ವತಿಯಿಂದ ನಡೆದ 14 ನೆಯ ರಕ್ತದಾನ ಶಿಭಿರದ ಅಧ್ಯಕ್ಷತೆಯನ್ನು ಜನಾಬ್ ಅಹ್ಮದ್ ಬಾವರವರು ವಹಿಸಿದ್ದರು.

ಕಾರ್ಯಕ್ರಮದ ವೇಧಿಕೆಯಲ್ಲಿ ಪೀಸ್ & ಅವೆರ್ನೆಸ್ ಟ್ರಸ್ಟಿನ ಸಂಸ್ಥಾಪಕರಾದ ಅಲ್ತಾಫ್ ಬಿಳಗುಳ, ಬ್ಲಡ್ ಡೋನರ್ಸ್ ಫೋರಂನ ಅಧ್ಯಕ್ಷರಾದ ಸಾದಿಕ್, ಬಣಕಲ್ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಪಿ.ವಿ.ವಾಸುದೇವ್,
ಬಣಕಲ್ ಗ್ರಾ.ಪಂ. ಅಧ್ಯಕ್ಷರಾದ ಬಿ.ವಿ. ಸುರೇಶ್,
ರಿವರ್ ವ್ಯೂ ಶಾಲೆಯ ಪ್ರಾಂಶುಪಾಲರಾದ ರಾಧ ಕಾರ್ಯಪ್ಪ,
ಕಾಫಿ ಬೆಳೆಗಾರರಾದ ಪ್ರವೀಣ್ ಗೌಡ,
ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ) ಇದರ ಅಡ್ಮೀನ್ ನಾಸೀರ್ ಬಿ.ಸಿ.ರೋಡ್,ಯೇನಪೋಯ ಆಸ್ಪತ್ರೆಯ ವೈದ್ಯರಾದ ಶಶಿಧರ್, ಅಬ್ದುಲ್ ರಝಾಕ್, ಕೆ.ಕೆ.ಎಂ.ಎ ಅಧ್ಯಕ್ಷರಾದ ಅಬ್ದುಲ್ ಅಝೀಝ್,ಉಪಾಧ್ಯಕ್ಷರಾದ ಆಸೀಫ್,
ರಿವರ್ ವ್ಯೂ ಶಾಲೆಯ ಛೇರ್ ಮ್ಯಾನ್ ಏ.ಸಿ.ಇಮ್ರಾನ್,
ಉಪಸ್ಥಿತರಿದ್ದರು.

ಕಾರ್ಯಕ್ರಮದ ನಿರೂಪಣೆಯನ್ನು ಮುಹಮ್ಮದ್ ಸಫ್ವಾನ್ ನಿರ್ವಹಿಸಿದರು.

ಬೆಳಿಗ್ಗೆ 10 ಗಂಟೆಗೆ ಪ್ರಾರಂಭವಾಗಿ ಮಧ್ಯಾಹ್ನ 1:00 ಗಂಟೆಗೆ ಮುಕ್ತಾಯವಾದ ರಕ್ತ ದಾನ ಶಿಬಿರದಲ್ಲಿ ಒಟ್ಟು 50 ಜನರು ಪಾಲ್ಗೊಂಡು ರಕ್ತದಾನ ಮಾಡಿದರು.ದಾನಿಗಳಿಂದ ರಕ್ತ ಸಂಗ್ರಹಿಸುವಲ್ಲಿ ಯೇನಪೋಯ ಆಸ್ಪತ್ರೆಯ ಬ್ಲಡ್ ಬ್ಯಾಂಕ್ ಅಧಿಕಾರಿಗಳ ತಂಡ ಹಾಗೂ ಸಿಬ್ಬಂದಿ ವರ್ಗದವರು ಸಹಕರಿಸಿದರು.

ಕಣ್ಣು ಕಾಣದಿದ್ದರೂ ಮಾನವೀಯತೆಯನ್ನು ಮೈಗೂಡಿಸಿ ಕೊಂಡಿರುವ ಸ್ಥಳೀಯರಾದ ಗಿರೀಶ್ ರವರು ರಕ್ತದಾನ ಮಾಡುವ ಮೂಲಕ ರಕ್ತದಾನ ಮಾಡಲು ಹಿಂಜರಿಯುವವರಿಗೆ ಮಾದರಿಯಾದದ್ದು ವಿಶೇಷವಾಗಿ ಸಾರ್ವಜನಿಕರ ಗಮನ ಸೆಳೆಯಿತು.

ರಕ್ತ ದಾನ ಮಾಡಿದ ಸರ್ವ ಸಹೃದಯೀ ದಾನಿಗಳಿಗೂ,ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ ಪ್ರತಿಯೋರ್ವರಿಗೂ ಹಾಗೂ ಕಾರ್ಯಕ್ರಮದ ಯಶಸ್ಸಿಗಾಗಿ ಹಗಲಿರುಳು ದುಡಿದ ಎಲ್ಲಾ ಕಾರ್ಯಕರ್ತರಿಗೂ,ಸಂಘಟಕರು ಕೃತಜ್ಞತೆಗಳನ್ನು ತಿಳಿಸಿದ್ದಾರೆ.

ಪ್ರಕಟಣೆ
ಮೀಡಿಯಾ ಬಳಗ
ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ)

Leave a Reply