ಪಣಜಿ: ಇಬ್ಬರು ಶಾಸಕರು ಬಿಜೆಪಿಸೇರುತ್ತಿರುವುದಾಗಿ ಘೋಷಿಸಿದರೂ ಕಾಂಗ್ರೆಸ್ ಗೋವಾದಲ್ಲಿ ಸರಕಾರ ರಚಿಸುವ ಕಸರತ್ತು ಮುಂದುವರಿಸಿದೆ. ಆದರೆ ಕಾಂಗ್ರೆಸ್ ಶಾಸಕರಾದ ದೇವಾನಂದ್ ಸೋಪ್ತೆ ಮತ್ತು ಸುಭಾಶ್ ಶಿರೋಡ್ಕರ್ ಮಂಗಳವಾರ ಕಾಂಗ್ರೆಸ್ಸಿಗೆ ರಾಜೀನಾಮೆ ನೀಡಿದ್ದಾರೆ.

ನಾವು ಇಂದು ಬಿಜೆಪಿ ಸೇರಲಿದ್ದೇವೆಎಂದು ಇಬ್ಬರೂ ಹೇಳಿದ್ದಾರೆ. ದಿಲ್ಲಿಯಲ್ಲಿ ಬಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾರನ್ನು ಭೇಟಿಯಾದ ಬಳಿಕ ಸುಭಾಶ್ ಹೇಳಿಕೆ ನೀಡಿದ್ದಾರೆ.
ದಯಾನಂದ್ ,ಸುಭಾಶ್ ರಾಜೀನಾಮೆ ಕಾಂಗ್ರೆಸ್‍ಗೆ ಹಿನ್ನಡೆಯಲ್ಲ. ಅವರು ರಾಜೀನಾಮೆ ನೀಡಿದರೂ ಗೋವಾದಲ್ಲಿ ಸರಕಾರ ರಚಿಸುವ ಪ್ರಯತ್ನವನ್ನು ನಾವು ಮುಂದುವರಿಸುತ್ತೇವೆ ಎಂದು ಗೋವಾ ಕಾಂಗ್ರೆಸ್ ವಕ್ತಾರ ನೀಲಕಾಂತ್ ಹಲಂಗರ್‍ಕರ್ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

ದಯಾನಂದ್ ಮತ್ತು ಸುಭಾಶ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಪತ್ರವನ್ನು ವಿಧಾನಸಭಾ ಸ್ಪೀಕರ್ ಡಾ. ಪ್ರಮೋದ್ ಸಾವಂತ್‍ರಿಗೆ ಮಂಗಳವಾರ ನೀಡಿದ್ದಾರೆ. ಇವರ ರಾಜೀನಾಮೆಯಿಂದಾಗಿ ಗೋವಾದ 40 ಮಂದಿ ಶಾಸಕರಲ್ಲಿ ಕಾಂಗ್ರೆಸ್‍ನ ಶಾಸಕರ ಸಂಖ್ಯೆ 14ಕ್ಕೆ ಕುಸಿದಿದೆ.

ಇತರ ಶಾಸಕರು ಒಗ್ಗಟ್ಟಿನಲ್ಲಿದ್ದಾರೆ.ಇನ್ನು ಯಾರು ಬಿಜೆಪಿಗೆ ಹೋಗುವುದಿಲ್ಲ. ಬಿಜೆಪಿ ಎರಡು ಶಾಸಕರನ್ನು ಕೊಂಡು ಹೋಯಿತು. ನಮಗೆ ಅವರ ಕ್ಯಾಂಪಿನಿಂದ ನಾಲ್ವರು ಸಿಗುತ್ತಾರೆ ಎಂದು ನೀಲಕಾಂತ್ ಹೇಳಿದರು.ಆದರೆ ಕಾಂಗ್ರೆಸ್ ಸೇರಲು ಸಿದ್ಧರಿರುವವರ ಹೆಸರನ್ನು ನೀಲಕಾಂತ್ ಬಹಿಂಗಪಡಿಸಿಲ್ಲ.

ದಯಾನಂದ್, ಸುಭಾಶ್‍ರ ರಾಜೀನಾಮೆಯ ಬಳಿಕಕಾಂಗ್ರೆಸ್ ರಾಜ್ಯಘಟಕ ಪಣಜಿಯಲ್ಲಿ ಸಭೆ ನಡೆಸಿತು. ಕಾಂಗ್ರೆಸ್ ತಿರುಗೇಟು ನೀಡಲಿದೆ ಎಂದು ಮಾಜಿಮುಖ್ಯಮಂತ್ರಿ ಹಾಗೂ ಪ್ರತಿಪಕ್ಷ ನಾಯಕ ಪ್ರತಾಪ್ ರಾಣೆ ಹೇಳಿದರು.

Leave a Reply