ಮಸ್ಸೂರಿ ಅರಣ್ಯ ವಿಭಾಗದಲ್ಲಿ ಅಕ್ರಮವಾಗಿ 25 ಮರಗಳನ್ನು ಕಡಿದದ್ದಕ್ಕಾಗಿ ರಾಷ್ಟ್ರೀಯ ಹಸಿರು ಟ್ರಿಬ್ಯೂನಲ್ (ಎನ್ಜಿಟಿಯು) ಮಾಜಿ ಡಿಜಿಪಿಯವರಿಗೆ 46,14,960 ರೂ. ದಂಡ ವಿಧಿಸಿದೆ. ಅರಣ್ಯ ಇಲಾಖೆಗೆ ಸಂಬಂಧಿಸಿದ ಪ್ರದೇಶ ಎಂದು ತಿಳಿದೂ ಮಾಜಿ ಅಧಿಕಾರಿ ಬಿ.ಎಸ್ .ಸಿಧು ಆ ಜಾಗವನ್ನು ಖರೀದಿಸಿರುವುದಾಗಿ ನ್ಯಾಯಾಲಯಕ್ಕೆ ಮನವರಿಕೆ ಆದುದರಿಂದ ಈ ದಂಡ ವಿಧಿಸಲಾಗಿದೆ.

ಮಾಜಿ ಅಧಿಕಾರಿ ಆ ಭೂಮಿಯಲ್ಲಿ ಮನೆಯನ್ನು ನಿರ್ಮಿಸಲು ಬಯಸಿದ್ದು, ಆ ನಿಟ್ಟಿನಲ್ಲಿ 25 ಮರಗಳನ್ನು ಕಡಿದಿದ್ದರು. ಇದೀಗ ಅವರಿಗೆ ಇದು ಮುಳ್ಳಾಗಿ ಪರಿಣಮಿಸಿದೆ.

ಪರಿಸರ ಕಾನೂನುಗಳ ಉಲ್ಲಂಘನೆಯು ನಾಗರಿಕ ಹಕ್ಕುಗಳ ಉಲ್ಲಂಘನೆಯಾಗಿದ್ದು, ಇದು ಶಿಕ್ಷಾರ್ಹವಾಗಿದೆ. ಮಾತ್ರವಲ್ಲ, ಸರಕಾರದ ಉನ್ನತ ಹುದ್ದೆಯಲ್ಲಿದ್ದಾಗ ಅರಣ್ಯ ಇಲಾಖೆಯ ಭೂಮಿಯನ್ನು ಸಿಧು ಅಕ್ರಮವಾಗಿ ಖರೀದಿಸಿ 25 ಮರಗಳನ್ನು ಅಕ್ರಮವಾಗಿ ಕಡಿದಿದ್ದಾರೆ .ಆದ್ದರಿಂದ ಇದನ್ನು ಪರಿಗಣಿಸಿ ಅವರು ಅದರ ಈಗಿನ ಮೌಲ್ಯದ ಮೂರು ಪಟ್ಟು ಹೆಚ್ಚು ಹಣ ದಂಡವಾಗಿ ನೀಡಬೇಕು ಎಂದು ತೀರ್ಪಿನಲ್ಲಿ ಆದೇಶಿಸಲಾಗಿದೆ.

Leave a Reply