ಇರಾನ್‍ನಿಂದ ಕಚ್ಚಾತೈಲ ಆಮದು ಮಾಡಿಕೊಳ್ಳುವುದಾಗಿ ಕೇಂದ್ರ ಪೆಟ್ರೋಲಿಯಮ್ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ. ಇರಾನಿನಿಂದ ಪೆಟ್ರೋಲ್ ಖರೀದಿಸಿದರೆ ದಿಗ್ಬಂಧನ ಹೇರುವುದಾಗಿ ಅಮೇರಿಕ ಎಚ್ಚರಿಸಿದ ಕೂಡಲೇ ಇರಾನ್‍ನಿಂದ ತೈಲ ಖರೀದಿಸುವ ನಿರ್ಧಾರವನ್ನು ಸರಕಾರ ಪ್ರಕಟಿಸಿದೆ.

ನಮ್ಮ ಎರಡು ತೈಲ ಕಂಪೆನಿಗಳು ಇರಾನ್‍ನಿಂದ ನವೆಂಬರ್‍ನಲ್ಲಿ ಆಮದು ಮಾಡಿಕೊಳ್ಳಬೇಕೆಂಬ ಆದೇಶ ನೀಡುತ್ತಾ ಈ ವಿಚಾರ ಪ್ರಕಟಿಸಿದರು. ಆದರೆ ಈ ತೈಲ ಖರೀದಿಯ ಮೇಲೆ ಅಮೇರಿಕ ವಿಧಿಸುವ ದಿಗ್ಭಂದನ ಬಾಧಿಸುವುದೇ ಎಂಬ ಕುರಿತು ಕೇಳಿದಾಗ, “ತಿಳಿದಿಲ್ಲ” ಎಂದಷ್ಟೇ ಉತ್ತರಿಸಿದರು.

ನವೆಂಬರ್ ನಾಲ್ಕರಿಂದ ಅಮೇರಿಕ ವಿಧಿಸುವ ದಿಗ್ಭಂಧನ ಜಾರಿಗೆ ಬರಲಿದೆ. ಅಮೇರಿಕಾ ದಿಗ್ಭಂಧನ ಹೇರುವ ನಿರ್ಧಾರ ಪ್ರಕಟಿಸಿದ ಬಳಿಕ ಮೊತ್ತ ಮೊದಲ ಬಾರಿ ಇರಾನ್‍ನಿಂದ ತೈಲ ಖರೀದಿಸುವ ಕುರಿತು ಸರಕಾರ ಅಭಿಪ್ರಾಯ ಪ್ರಕಟಿಸಿದೆ. ದೇಶದ ಹಿತಾಸಕ್ತಿಯನ್ನು ಬಯಸಿ ಈ ನಿರ್ಧಾರ ಪ್ರಕಟಿಸಿದ್ದೇವೆಂದು ಸಚಿವರು ಹೇಳಿದರು.

Leave a Reply