ಹೊಸದಿಲ್ಲಿ: ಅಮೆರಿಕದ ದಿಗ್ಬಂಧಬೆದರಿಕೆಗೆ ಭಾರತ ಕ್ಯಾರೆ ಮಾಡದೆ ರಷ್ಯದಿಂದ ಎಸ್-400ಮಿಸೈಲ್‍ನ್ನು ಖರೀದಿಸುವ ಒಪ್ಪಂದಕ್ಕೆ ಭಾರತ ಸಹಿಹಾಕಿದೆ.543 ಕೋಟಿ ಡಾಲರ್(40000 ಕೋಟಿ ರೂಪಾಯಿ) ಒಪ್ಪಂದ ಇದು. ರಷ್ಯದಿಂದ ನಾಲ್ಕು ಮಿಸೈಲ್ ರಕ್ಷಣಾ ವ್ಯವಸ್ಥೆಯ್ನು ಭಾರತ ಖರೀದಿಸುತ್ತಿದೆ.

ಭಾರತಕ್ಕೆ ಬರುವ ಮಿಸೈಲುಗಳು, ಯುದ್ಧ ವಿಮಾನಗಳನ್ನು, ಡ್ರೋನ್‍ಗಳನ್ನು ನಾಶಪಡಿಸುವ ಸಾಮರ್ಥ್ಯವನ್ನುಹೊಂದಿದೆ. 380 ಕಿಲೊಮೀಟರ್ ದೂರದಲ್ಲಿ ಶತ್ರುವಿನ ಅಸ್ತ್ರವನ್ನು ನಾಶಪಡಿಸಲು ಇದು ಭಾರತಕ್ಕೆ ನೆರವಾಗಲಿದೆ.

ಜತೆಯಲ್ಲಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಸಹಕಾರಿ ಒಪ್ಪಂದವನ್ನು ಕೂಡ ಮಾಡಿಕೊಳ್ಳಲಾಗಿದೆ. ಒಪ್ಪಂದ ಪ್ರಕಾರ ಸೈಬೀರಿಯದಲ್ಲಿ ಭಾರತ ಬಾಹ್ಯಾಕಾಶ ನಿರೀಕ್ಷಣಾ ಕೇಂದ್ರವನ್ನು ಸ್ಥಾಪಿಸಲಿದೆ.

ಇವಲ್ಲದೆ ಒಟ್ಟು 20 ಒಪ್ಪಂದಗಳನ್ನು ಉಭಯ ದೇಶಗಳು ಮಾಡಿಕೊಂಡಿವೆ. ಚರ್ಚೆಯ ತೀರ್ಮಾನಗಳು ಮತ್ತು ಒಪ್ಪಂದಗಳ ಬಗ್ಗೆ ಶೀಘ್ರದಲ್ಲಿ ಜಂಟಿ ಹೇಳಿಕೆಯು ಹೊರಬರಲಿದೆ.

Leave a Reply