Priya ramani

ಹೊಸದಿಲ್ಲಿ: ಪತ್ರಕರ್ತೆ ಪ್ರಿಯಾ ರಮಣಿ ಕೇಂದ್ರ ವಿದೇಶ ಸಹ ಸಚಿವ ಹಾಗೂ ಹಿರಿಯ ಪತ್ರಕರ್ತ ಎಂಜೆ ಅಕ್ಬರ್ ವಿರುದ್ಧ ಲೈಂಗಿಕ ಆರೋಪ ಹೊರಿಸಿದ್ದಾರೆ. ಪ್ರಿಯಾ ರಮಣಿ ಸದ್ದಯ ಲೈವ್ಮಿಂಟ್ ನ್ಯಾಶನಲ್ ಫೀಚರ್ಸ್ ಎಡಿಟ್ ಆಗಿದ್ದಾರೆ. ರಮಣಿಗೆ ಈ ಕಹಿ ಅನುಭವ 1977ರಲ್ಲಿ ಮುಂಬೈಯಲ್ಲಿ ಆಗಿತ್ತು ಎಂದು ಅವರೇ ಟ್ವಿಟರ್‍ನಲ್ಲಿ ತಿಳಿಸಿದ್ದಾರೆ.

ಕಳೆದ ವರ್ಷ ಆರಂಭಗೊಂಡ ಮೀಟು ಅಭಿಯಾನದ ನಂತರ ದೊಡ್ಡ ದೊಡ್ಡ ಜನರ ದಡ್ಡತನದ ವರ್ತನೆಗಳು ಬಹಿರಂಗಗೊಳ್ಳುತ್ತಿದ್ದು ಈಗ ಪ್ರಿಯಾ ರಮಣಿ, ಎಂ ಜೆ ಅಕ್ಬರ್ ವಿರುದ್ಧ ಟ್ವೀಟರ್‍ನಲ್ಲಿ ನೇರ ಆರೋಪ ಹೊರಿಸಿದರು.

1977ರಲ್ಲಿ ಟೆಲಿಗ್ರಾಫ್‍ನ ಸ್ಥಾಪಕ ಸಂಪಾದಕ ಅಕ್ಬರ್ ಸಂದರ್ಶನ ಮಾಡಲಿಕ್ಕಿದೆ ಎಂಬ ನೆಪದಲ್ಲಿ ಮುಂಬೈಯ ಹೊಟೇಲ್‍ಗೆ ತನ್ನನ್ನು ರಾತ್ರೆ ಏಳು ಗಂಟೆಗೆ ಕರೆಯಿಸಿ ಕೊಂಡಿದ್ದರು. ಮದ್ಯ ಕೊಡಿಸುವುದಾಗಿ ಹೇಳಿ ಕೆಟ್ಟದಾಗಿ ವರ್ತಿಸಿದರು ಎಂದು ರಮಣಿ ಹಳೆಯ ಘಟನೆಯನ್ನು ನೆನಪಿಸಿಕೊಂಡಿದ್ದರು.

ಆ ವೇಳೆ ರಮಣಿ 23ವರ್ಷದ ಯುವತಿಯಾಗಿದ್ದರು. ಈ ಘಟನೆಯನ್ನು ಅವರು ವೋಗ್ ಮ್ಯಾಗಝಿನ್‍ನಲ್ಲಿ ಕಳೆದ ವರ್ಷವೇ ಹಂಚಿಕೊಂಡಿದ್ದರು. ವೋಗ್ ಮ್ಯಾಗಝಿನ್‍ನ ಲೇಖಕನವನ್ನು ತನ್ನ ಟ್ವಿಟರ್‍ನಲ್ಲಿ ಮರು ಪ್ರಕಟಿಸಿ, ತನಗೆ ಕೆಟ್ಟ ಅನುಭವವಾದ ವ್ಯಕ್ತಿಯ ಹೆಸರನ್ನು ಬಹಿರಂಗಗೊಳಿಸಿದ್ದಾರೆ. ತನ್ನಂತೆ ಇಂತಹ ಕೆಟ್ಟ ಅನುಭವ ಮಾಧ್ಯಮ ವಿದ್ಯಾರ್ಥಿಗಳಾಗಿರಬಹುದು. ಆದ್ದರಿಂದ ಇಂಥ ಕೆಟ್ಟ ಅನುಭವಗಳನ್ನು ಬಹಿರಂಗಪಡಿಸಲಿ ಎಂದು ಪ್ರಿಯಾ ರಮಣಿ ಬರೆದಿದ್ದಾರೆ.

Leave a Reply