ಇದು ಮೊಬೈಲ್ ಯುಗ. ಮೊಬೈಲ್ ಇಲ್ಲದ ಮನುಷ್ಯನನ್ನು ಊಹಿಸಲು ಸಾಧ್ಯವಿಲ್ಲ. ಭಿಕ್ಷುಕನಿಂದ ಹಿಡಿದು ದೊಡ್ಡ ಶ್ರೀಮಂತರವರೆಗೆ ಎಲ್ಲರೂ ಮೊಬೈಲ್ ಬಳಕೆದಾರರೇ!

ಮೊಬೈಲ್ ಇಂದು ನಮ್ಮ ದಿನಚರಿಯ ಒಂದು ಅವಿಭಾಜ್ಯ ಅಂಗವಾಗಿದೆ ಹಾರ್ವರ್ಡ್ ಯೂನಿವರ್ಸಿಟಿಯಿಂದ ಮೈಂಡ್-ಬ್ರೇನ್ ನಡವಳಿಕೆಯ ಪರಿಣತಿ ಮತ್ತು ಹ್ಯಾಪಿನೆಸ್ ವಿಜ್ಞಾನದ ಪರಿಣಿತರಾದ ನ್ಯಾನ್ಸಿ ಎಟ್ಕೋಫ್ನ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲಾದ ದೂರಸಂಪರ್ಕ ಕಂಪನಿ ಮೊಟೊರೊಲಾ ನಡೆಸಿದ ಅಧ್ಯಯನದ ಪ್ರಕಾರ,
“ನಾವು ಇಂದಿನ ಪೀಳಿಗೆ ಜೀವನದ ನಿಯಂತ್ರಣವನ್ನು ಕಳೆದುಕೊಳ್ಳುತ್ತಿದ್ದೇವೆ” ಎಂದು ಹೇಳಿದೆ.

ಫೋನ್ ಮತ್ತು ನೈಜ ಜೀವನದ ನಡುವಿನ ಸಮತೋಲನವನ್ನು ಕಂಡುಕೊಳ್ಳುವಲ್ಲಿ ಭಾರತೀಯರು ವಿಫಲರಾಗುತ್ತಿದ್ದಾರೆ.

ಸ್ಮಾರ್ಟ್ಫೋನ್ ಬಳಕೆಯಿಂದ ಸಂಬಂಧಗಳಲ್ಲಿ ಪರಿಣಾಮ ಬೀರಿದೆ ಎಂದು ಅಧ್ಯಯನ ತಿಳಿಸಿದೆ. ಶೇಕಡಾ 50 ರಷ್ಟು ಮಂದಿ ತಮ್ಮ ಫೋನನ್ನು ಅಗತ್ಯಕ್ಕಿಂತ ಹೆಚ್ಚು ಬಾರಿ ಬಾರಿ ನೋಡುತ್ತಾರೆ.

1990 ರ ದಶಕ ಮತ್ತು 2000 ರ ದಶಕದಲ್ಲಿ ಜನಿಸಿದ ಯುವ ಪೀಳಿಗೆಯು ಸ್ಮಾರ್ಟ್ ಫೋನ್ ಚಟದಲ್ಲಿ ಮುಳುಗಿದ್ದಾರೆ.

Leave a Reply