ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ಹಿಂದುತ್ವದ ಆಧಾರದಲ್ಲಿ ಅಧಿಕಾರ ಗಳಿಸುವ ಗುರಿ ಹೊಂದಿದ್ದಾರೆ. ಇಬ್ಬರದೂ ಡೋಂಗಿ ಹಿಂದುತ್ವ ಎಂದು ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಆರೋಪ ಮಾಡಿದ್ದಾರೆ.

ಇಂದು ಉಡುಪಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡುತ್ತಾ ಅವರು, ತಮ್ಮ ಕಾರ್ಯಕರ್ತರು ಸತ್ತರೆ ಕೇವಲ ಒಮ್ಮೆ ಕಣ್ಣೀರು ಹಾಕುತ್ತಾರೆ. ಕೋರ್ಟ್ ಕಚೇರಿ ಎಂದು ಅಲೆದಾಡುವ ಕಾರ್ಯಕರ್ತರನ್ನು ಯಾವ ನಾಯಕರೂ ತಿರುಗಿ ನೋಡಲ್ಲ. ಗೋಹತ್ಯೆಯನ್ನು ಬಿಜೆಪಿ ನಿಷೇಧ ಮಾಡುತ್ತೇವೆ ಎಂದಿದ್ದು ಇದುವರೆಗೆ ನಿಷೇಧ ಮಾಡಿಲ್ಲ. ನನ್ನ ಮೇಲೆ 7 ಕೇಸು ಹಾಕಿ ಜೈಲಿಗೆ ಕಳುಹಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

ಕಾಂಗ್ರೆಸ್‌ಗೆ ಈಗ ಹಿಂದೂಗಳ ನೆನಪಾಗಿದೆ. ರಾಹುಲ್ ಗಾಂಧಿ ದೇವಸ್ಥಾನ ಪ್ರವೇಶ ಎಲ್ಲವೂ ರಾಜಕೀಯ ಪ್ರೇರಿತವಾಗಿದೆ. ಶ್ರೀರಾಮ ಸೇನೆ ಮುಂಬರುವ ಚುನಾವಣೆಯಲ್ಲಿ ಶಿವ ಸೇನೆ ಜೊತೆ ಸೇರಿಕೊಂಡು 52 ಕಡೆ ಸ್ಪರ್ಧಿಸಲಿದೆ. ನಮ್ಮದು ಮೃದು ಅಥವಾ ಡೋಂಗಿ ಹಿಂದುತ್ವ ಅಲ್ಲ. ತಾನು ಶೃಂಗೇರಿ ಅಥವಾ ತೆರದಾಳುವಿನಲ್ಲಿ ತಾನು ಸ್ಪರ್ಧಿಸುವುದಾಗಿ ಮುತಾಲಿಕ್ ಹೇಳಿದರು.

ಶಿವಸೇನೆಯಿಂದ ಕನ್ನಡಕ್ಕೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲಾಗುವುದು. ಯಾವುದೇ ಕಾರಣಕ್ಕೂ ಬಿಜೆಪಿ ಜೊತೆ ಮೈತ್ರಿ ಮಾಡಲ್ಲ ಎಂದು ಹೇಳಿದರು.

Leave a Reply