ಸಾಂದರ್ಭಿಕ ಚಿತ್ರ

ಬೇಕಾಗುವ ಸಾಮಗ್ರಿಗಳು:

ಮಟನ್ – 1/2 ಕೆಜಿ
ನೀರುಳ್ಳಿ – 4-5
ಬೆಳ್ಳುಳ್ಳಿ – 1 ಗೆಡ್ಡೆ
ಶುಂಠಿ – 1 ದೊಡ್ಡ ತುಂಡು, ಮೊಸರು – 1/4 ಕಪ್
ಉಪ್ಪು, ಖಾರ, ಪುಡಿಮೆಣಸು, ಗರಂಮಸಾಲ-ರುಚಿಗೆ ತಕ್ಕಷ್ಟು.
ಒಗ್ಗರಣೆಗೆ ಆಲಿವ್ ಆಯಿಲ್, ಸಾಸಿವೆ, ಜೀರಿಗೆ, ಸೋಂಪು, ಏಲಕ್ಕಿ, ಚಕ್ಕೆ, ಲವಂಗ, ಮೊಗ್ಗು, ಇಡೀ ಒಣಮೆಣಸಿನ ಕಾಯಿ, ಕರಿಬೇವು.
ಕೊತ್ತಂಬರಿ ಸೊಪ್ಪು, ಪುದೀನಾ ಸೊಪ್ಪು – 1/2 ಕಪ್

ಮಾಡುವ ವಿಧಾನಗಳು:

ಮಟನ್ ಶುಚಿಗೊಳಿಸಿ ಸಣ್ಣದಾಗಿ ತುಂಡರಿಸಿ, 2 ನೀರುಳ್ಳಿ, ಬೆಳ್ಳುಳ್ಳಿ, ಶುಂಠಿ ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಪ್ರೆಶರ್ ಪ್ಯಾನಿನಲ್ಲಿ ಎಣ್ಣೆ ಬಿಸಿಮಾಡಿ ಒಗ್ಗರಣೆ ಸಾಮಗ್ರಿ ಹಾಕಿ ಚಟಪಟಾಯಿಸಿ. ಮೊದಲು ಹೆಚ್ಚಿದ ಈರುಳ್ಳಿ ಹಾಕಿ ಬಾಡಿಸಿ. ನಂತರ ಇದಕ್ಕೆ ರುಬ್ಬಿದ ಮಸಾಲೆ, ಉಪ್ಪು ಹಾಕಿ ಚೆನ್ನಾಗಿ ಬಾಡಿಸಿ. ಆಮೇಲೆ ಅರ್ಧ ಲೋಟ ನೀರು ಅಥವಾ ಮೊಸರು ಬೆರೆಸಿ ಕೈಯಾಡಿಸಿ. ಖಾರ, ಪುಡಿಮೆಣಸು, ಗರಂಮಸಾಲ ಹಾಕಿ ಕುದಿ ಬಂದಾಗ ಮಟನ್ ತುಂಡುಗಳನ್ನು ಹಾಕಿ ಕೈಯಾಡಿಸಿ ಮುಚ್ಚಳ ಮುಚ್ಚಿ 4 ಸೀಟಿ ಬಂದಾಗ ಕೆಳಗಿಳಿಸಿ ಸೊಪ್ಪಿನಿಂದ ಅಲಂಕರಿಸಿ ಬಿಸಿಯಿರುವಾಗಲೇ ಬಡಿಸಿರಿ.

Leave a Reply