ನವದೆಹಲಿ: ಭಾರತದಲ್ಲಿ ಕ್ರಿಕೆಟ್ ಆಟಗಾರರಿಗೆ ಬಿಟ್ಟರೆ ಬೇರೆಲ್ಲ ಇತರ ಆಟಗಾರರಿಗೆ ನಮ್ಮ ದೇಶದಲ್ಲಿ ಮಾನ್ಯತೆ ಸಿಗುವುದಿಲ್ಲ ಎಂಬುದಕ್ಕೆ ಹಲವಾರು ಜ್ವಲಂತ ಉದಾಹರಣೆಗಳು ನಮ್ಮ ಮುಂದೆ ಇದೆ.

ಇತ್ತೀಚೆಗೆ ಮುಕ್ತಾಯಗೊಂಡ ಏಷ್ಯನ್​ ಗೇಮ್ಸ್​-2018 ಕ್ರೀಡಾ ಕೂಟದ “ಸೆಪಕ್​ ತಕ್ರವ್”​ ಆಟದಲ್ಲಿ ಕಂಚಿನ ಪದಕ ಗೆದ್ದಿದ್ದ ಭಾರತ ತಂಡದ ಹರೀಶ್​ ಕುಮಾರ್​ ಅವರ ಕುಟುಂಬ ತೀವ್ರ ಬಡತನ ಎದುರಿಸುತ್ತಿದೆ. ಹೀಗಾಗಿ ಪದಕ ವಿಜೇತ ಕ್ರೀಡಾಪಟು ಹರೀಶ್​ ಜೀವನ ಸಾಗಿಸಲು ದೆಹಲಿಯಲ್ಲಿರುವ ತಮ್ಮ ತಂದೆಯ ಅಂಗಡಿಯಲ್ಲಿ ಚಹಾ ಮಾರಾಟ ಮಾಡುತ್ತಿದ್ದಾರೆ.

ಈ ಕುರಿತು ರಾಷ್ಟ್ರೀಯ ಸುದ್ದಿ ಸಂಸ್ಥೆ ಎಎನ್​ಐ ಜತೆ ಮಾತನಾಡಿರುವ ಹರೀಶ್​, ನಮ್ಮ ಕುಟುಂಬ ದೊಡ್ಡದಿದೆ. ಆದರೆ, ಆದಾಯ ಮಾತ್ರ ಕಡಿಮೆ. ಅಂಗಡಿಯಲ್ಲಿ ಟೀ ಮಾರಾಟ ಮಾಡುವ ಮೂಲಕ ನಾನು ನನ್ನ ಕುಟುಂಬಕ್ಕೆ ನೆರವಾಗುತ್ತಿದ್ದೇನೆ. ಇದರ ನಡುವೆಯೂ ಮಧ್ಯಾಹ್ನ 2 ರಿಂದ 6 ಗಂಟೆ ವರೆಗೆ ನಾನು ಕ್ರೀಡಾಭ್ಯಾಸದಲ್ಲಿ ತೊಡಗಿಕೊಳ್ಳುತ್ತೇನೆ. ಭವಿಷ್ಯದಲ್ಲಿ ನಾನೊಂದು ಉತ್ತಮ ನೌಕರಿ ಪಡೆಯಬೇಕಾಗಿದೆ ಎಂದು ಹೇಳಿದ್ದಾರೆ.

ಏಷ್ಯಾನ್ ಗೇಮ್ಸ್ ನಲ್ಲಿ ಭಾರತದ ಗೌರವನ್ನು ಹೆಚ್ಚಿಸಿದ ಆಟಗಾರನಿಗೆ ಸರಕಾರದಿಂದ ಅರ್ಥಿಕ ಸಹಾಯ ಮತ್ತು ಒಂದು ಉತ್ತಮ ಉದ್ಯೋಗದ ಅವಶ್ಯಕತೆ ಖಂಡಿತ ಇದೆ!

Leave a Reply