ಹೊಸದಿಲ್ಲಿ: ಎನ್‍ಸಿಪಿ ಅಧ್ಯಕ್ಷ ಶರದ್‍ಪವಾರ್ ಪ್ರಧಾನಿ ನರೇಂದ್ರ ಮೋದಿಯನ್ನು ಬೆಂಬಲಿಸಿದ್ದನ್ನು ಪ್ರತಿಭಟಿಸಿ ಸಂಸದ ತಾರಿಕ್ ಅನ್ವರ್ ಪಾರ್ಟಿಗೆ ರಾಜೀನಾಮೆ ನೀಡಿದ್ದಾರೆ. ರಫೇಲ್ ಭ್ರಷ್ಟಾಚಾರದಲ್ಲಿ ಪ್ರಧಾನಿಯನ್ನು ಬೆಂಬಲಿಸಿ ಶರದ್‍ ಪವಾರ್ ರಂಗಪ್ರವೇಶಿಸಿದ್ದರು. ಇದರ ಬೆನ್ನಿಗೆ ತಾರಿಕ್ ಅನ್ವರ್ ಪಾರ್ಟಿಗೆ ರಾಜೀನಾಮೆ ನೀಡಿದ್ದಾರೆ.

ಶರದ್‍ಪವಾರ್ ಹೇಳಿಕೆ ನೋವು ತಂದಿದೆ. ಆದ್ದರಿಂದ ಪಾರ್ಟಿಗೆ ರಾಜೀನಾಮೆ ನೀಡುತ್ತಿರುವುದಾಗಿ ಅವರು ಹೇಳಿದರು. ರಫೆಲ್ ವ್ಯಹಾರದಲ್ಲಿ ಭ್ರಷ್ಟಾಚಾರ ನಡೆದಿದೆ. ತನಿಖೆ ನಡೆಯಬೇಕಾಗಿದೆ ಎಂದು ಅನ್ವರ್ ಹೇಳಿದರು.

ಬಿಹಾರದ ಕತಿಯಾರಿನ ಸಂಸದರಾಗಿದ್ದು ಶರದ್ ಪವಾರ್‍ರ ನಿಕವರ್ತಿಯಾಗಿರುವ ತಾರಿಕ್ ಅನ್ವರ್ ಪವಾರ್, ಪಿಎ ಸಂಗ್ಮಾರೊಂದಿಗೆ ಎನ್‍ಸಿಪಿ ರೂಪೀಕರಿಸಿದ್ದರು. ಮೋದಿಯನ್ನು ಬೆಂಬಲಿಸಿದ ಪವಾರ್ ಹೇಳಿಕೆಯಲ್ಲಿ ಕಾಂಗ್ರೆಸ್ ವಿರುದ್ಧ ಅಮಿತ್ ಶಾ ಸಹಿತ ಬಿಜೆಪಿ ನಾಯಕರು ಶಸ್ತ್ರವನ್ನಾಗಿ ಮಾಡಿದ್ದರು.

Leave a Reply