ಭೋಪಾಲ: ಅಲೀಜಪುರ ಜಿಲ್ಲೆಯ ಮಾಲಿ ಸಮಾಜದಲ್ಲಿ ಹತ್ತು ವರ್ಷಕ್ಕಿಂತ ಹೆಚ್ಚು ವಯೋಮಾನದ ಹುಡುಗಿಯರು ತೊಡುವ ಬಟ್ಟೆಯ ಕುರಿತು ಹೊಸ ಆದೇಶ ಜಾರಿಯಾಗಿದೆ. ಮಾಲಿ ಸಮಾಜ ಭಾರತೀಯ ಸಂಸ್ಕೃತಿಯನ್ನು ರಕ್ಷಿಸುವ ಸಲುವಾಗಿ ಹುಡುಗಿಯರು ಜೀನ್ಸ್ ಮತ್ತು ಟೀಶರ್ಟ್ ಅಥವಾ ಟಾಪ್ ಧರಿಸಬಾರದೆಂದು ನಿರ್ಧರಿಸಿದೆ. ಈ ಸಮಾಜದ ಜನರ ನಂಬಿಕೆಯಂತೆ ಹುಡುಗಿರಯ ಸಣ್ಣ ಮತ್ತು ಬಿಗಿಯಾದ ಉಡುಪು ಧರಿಸುವುದರಿಂದ ಅವರನ್ನು ಇತರರು ಕೆಟ್ಟ ದೃಷ್ಟಿಯಲ್ಲಿ ನೋಡುತ್ತಾರೆ.

ಮಧ್ಯಪ್ರದೇಶದ ಅಲಿರಾಜಪುರ ಜಿಲ್ಲೆಯ ಮಾಲಿ ಸಮಾಜದ ಮಹಿಳಾಮಂಡಲ ಮತ್ತು ಸಾಮಾಜದ ಹಿರಿಯರು ಒಂದು ಬೈಠಕ್ ಶುಕ್ರವಾರ ಮಾಡಿದ್ದರು. ಇದರಲ್ಲಿ ಹತ್ತು ವರ್ಷಕ್ಕಿಂತ ಹೆಚ್ಚು ವಯೋಮಾನದ ಹುಡುಗಿಯರು ಯಾವುದೇ ಕಾರ್ಯಕ್ರಮಗಳಿಗೆ ಪಾಶ್ಚಾತ್ಯ ಉಡುಪು ಶೈಲಿಯ ಬಟ್ಟೆಗಳನ್ನು ಧರಿಸಬಾರದೆಂದು ನಿರ್ಧರಿಸಲಾಗಿದೆ. ಈ ನಿರ್ಧಾರದ ಕುರಿತು ಕೇಳಿದಾಗ ಸಮಾಜದ ಕೆಲವರು ಭಾರತೀಯ ಸಂಸ್ಕೃತಿಯ ರಕ್ಷಣೆಗಾಗಿ ಮಾಲಿಸಮಾಜ ಪ್ರಾಮುಖ್ಯ ನಿರ್ಧಾರ ತಳೆದಿದೆ ಎಂದು ತಿಳಿಸಿದ್ದಾರೆ.

Leave a Reply