ಬೆಂಗಳೂರು: ಕಿರಿಕ್ ಹುಡುಗಿ ಸಂಯುಕ್ತ ಹೆಗಡೆ ಗೆಸ್ಟ್ ಆಗಿ ಬಿಗ್ ಬಾಸ್ ಮನೆಗೆ ಬಂದು ದೊಡ್ಡ ಅವಾಂತರ ಮಾಡಿದ್ದಾರೆ. ಸಂಯುಕ್ತ ಅವರು ಬಿಗ್ ಬಾಸ್ ಮನೆಗೆ ಬಂದು 15 ದಿನವು ಆಗಿಲ್ಲ, ಆಗಲೇ ಹಾರಾಟ ನಡೆಸಿ ಹೊರಹೋಗಿದ್ದಾರೆ. ಕಾಲೇಜು ಕುಮಾರ‌ ಎಂಬ ಕನ್ನಡ ಸಿನಿಮಾ ನಟಿಸಿದ ಈ ನಟಿ ಅಲ್ಲೂ ಕೆಲ ವಿಚಾರದ ಮೇಲೆ ಕಿರಿಕ್ ಮಾಡಿ ಸುದ್ದಿಯಾಗಿದ್ದರು.

ಕಲರ್ಸ್ ಕನ್ನಡದಲ್ಲಿ ಮೂಡಿ ಬರುವ ಜನಪ್ರಿಯ ರಿಯಾಲಿಟಿ ಶೋ ‘ಬಿಗ್‍ಬಾಸ್’ನಲ್ಲಿ ಸಂಯುಕ್ತ ಹೆಗಡೆ ಭಾರೀ ರಂಪಾಟ ಮಾಡಿದ್ದಾರೆ. ಮುಟ್ಟಿದ್ರೆ ತಟ್ಬೀಡ್ತಿನಿ ಅಂದವರು ಪಕ್ಕಾ ರೌಡಿಯಂತೆ ಸಮೀರ್ ಆಚಾರ್ಯ ಅವರ ಕೆನ್ನೆಗೆ ಬಾರಿಸಿ ಶೋದಿಂದ ಹೊರದಬ್ಬಲ್ಪಟ್ಟಿದ್ದಾರೆ. ಪ್ರತಿ ದಿನದ ಟಾಸ್ಕ್ ನಂತೆ ಬುಧವಾರ ಸ್ಪರ್ಧಿಗಳಿಗೆ ಟಾಸ್ಕನ್ನು ನೀಡಲಾಗಿತ್ತು. ಅದರಂತೆ ಮಹಿಳಾ ತಂಡ ಹಾಗೂ ಪುರುಷ ತಂಡದ ಸ್ಪರ್ಧಿಗಳಿಗೆ ದಾರ ಕಟ್ಟಿದ ಗೋಪುರವನ್ನು ನೀಡಲಾಗಿತ್ತು. ಪುರುಷ ಸ್ಪರ್ಧಿಗಳು ಮಹಿಳಾ ಸ್ಪರ್ಧಿಗಳ ಬಳಿ ಇರುವ ಗೋಪುರದ ದಾರವನ್ನು ಕತ್ತರಿಯಿಂದ ಕತ್ತರಿಸಬೇಕಿತ್ತು. ಈ ಸಂದರ್ಭದಲ್ಲಿ ತನ್ನನ್ನು ಸಮೀರ್ ಆಚಾರ್ಯ ಮುಟ್ಟಿದ್ರು ಎಂಬ ನೆಪವೊಡ್ಡಿ ಸಂಯುಕ್ತ ಸಮೀರ್ ಆಚಾರ್ಯರ ಮೇಲೆ ಕೈ ಮಾಡಿದ್ದಾರೆ.

ಸಂಯುಕ್ತ ರಂಪಾಟದಿಂದ ಟಾಸ್ಕ್ ಅರ್ಧಕ್ಕೆ ನಿಂತಿತು. ಇಬ್ಬರನ್ನು ಕನ್ಫೆಶನ್ ರೂಮಿಗೆ ಕರೆದ ಬಿಗ್‍ಬಾಸ್ ಸಮೀರ್ ಮತ್ತು ಸಂಯುಕ್ತಾ ಹೇಳಿಕೆಯನ್ನು ಪಡೆದರು. ಕೊನೆಗೆ ಸಂಯುಕ್ತಾ ಭಾವಾವೇಷದಿಂದ ಸಮೀರ್ ಮೇಲೆ ಕೈ ಮಾಡಿ ಹಲ್ಲೆ ನಡೆಸಿದ್ದಾರೆಂದು ಹೊರ ಹೋಗುವಂತೆ ಆದೇಶಿದರು. ಬಿಗ್ ಬಾಸ್ ಮನೆಯಿಂದ ಹೊರ ಹೋಗುವ ಮುನ್ನ ಸಂಯುಕ್ತಾ ಸಮೀರ್ ಬಳಿ ಕ್ಷಮೆ ಯಾಚಿಸಿದರು. ಸಮೀರ್ ಆಚಾರ್ಯರು ಸಹ ಸಂಯುಕ್ತಾರನ್ನು ಬಳಿ ಇನ್ನೊಮ್ಮೆ ಯಾರೊಂದಿಗೂ ಈ ರೀತಿಯಲ್ಲಿ ಕೋಪ ಮಾಡಿಕೊಳ್ಳಬೇಡಿ ಎಂದು ಹೇಳಿ ಸಂಯುಕ್ತಾರನ್ನು ಮನೆಯಿಂದ ಕಳುಹಿಸಿಕೊಟ್ಟರು..

Leave a Reply