ಪಣಜಿ: ಗೋವಾದಲ್ಲಿ ಕಾಂಗ್ರೆಸ್ ಶಾಶಕರು ಬಿಜೆಪಿಯೆಡೆಗೆ ವಾಲುತ್ತಿದ್ದಾರೆಎಂದು ಮಾಧ್ಯಮಗಳು ವರದಿ ಮಾಡಿವೆ. ಘಟಕ ಪಕ್ಷಗಳು ಬಿಜೆಪಿಯ ವಿರುದ್ಧ ಮುನಿಸಿಕೊಂಡ ಹಿನ್ನೆಲೆಯಲ್ಲಿ ಸರಕಾರ ರಚಿಸುವುದಾಗಿ ಕಾಂಗ್ರೆಸ್ ರಾಜ್ಯಪಾಲರನ್ನು ಭೇಟಿಯಾಗಿದ್ದರೂ ಕಾಂಗ್ರೆಸ್ಸಿನ ಕೆಲವು ಶಾಸಕರು ಬಿಜೆಪಿಯತ್ತ ಒಲವಿಟ್ಟುಕೊಂಡಿದ್ದಾರೆಂದು ವರದಿಗಳು ತಿಳಿಸಿವೆ. ಈಗಾಗಲೇ ಕಾಂಗ್ರೆಸ್ಸಿನ ಇಬ್ಬರು ಶಾಸಕರು ಕಳೆದ ದಿವಸ ವಿದೇಶಕ್ಕೆ ಹೋಗಿದ್ದಾರೆ.

ರಾಜ್ಯಪಾಲೆ ಮೃದುಲಾ ಸಿನ್ಹರನ್ನು ಕಾಂಗ್ರೆಸ್ ಸರಕಾರ ರಚನೆ ಕುರಿತು ಭೇಟಿಯಾಗಿದೆ. ಆದರೆ ಕಾಂಗ್ರೆಸ್ಸಿನಲ್ಲಿ ಹಲವು ಶಾಸಕರು ಬಿಜೆಪಿಗೆ ನಿಕಟವಾಗುತ್ತಿದ್ದಾರೆ. ನಿರ್ಣಾಯಕ ಸಮಯದಲ್ಲಿ ಕಾಂಗ್ರೆಸ್ ಶಾಸಕ ಜೆನಿಫರ್ ಮೊನ್‍ಸೆರಾಟ್ ಚೀನಕ್ಕೆ ಮತ್ತು ಫಿಲಿಪ್ಪಿನೆರಿ ರಾಡ್ರಿಗಸ್ ಯುರೋಪಿಗೂ ಪ್ರವಾಸ ಹೋಗಿದ್ದಾರೆ. ಇದು ಮಾಧ್ಯಮಗಳ ಸಂದೇಹಗಳಿಗೆ ನಿಮಿತ್ತವಾಗಿದೆ.

ಆದರೆ ಕಾಂಗ್ರೆಸ್ ಇಬ್ಬರೂ ಪಾರ್ಟಿ ನಾಯಕರಿಗೆ ತಿಳಿಸಿ ವಿದೇಶಕ್ಕೆ ತೆರಳಿದ್ದಾರೆಂದು ಹೇಳುತ್ತಿದೆ. ಮುಖ್ಯಮಂತ್ರಿ ಮನೋಹರ ಪಾರಿಕ್ಕರ್ ಅನಾರೋಗ್ಯದ ನಂತರ ಉಪಮುಖ್ಯಮಂತ್ರಿಯಾಗಿ ಎಂಜಿಪಿ ನಾಯಕನನ್ನು ನಿಯೋಜಿಸಲು ತೀರ್ಮಾನಿಸುವುದರೊಂದಿಗೆ ಘಟಕ ಪಕ್ಷಗಳು ಸರಕಾರದ ಕುರಿತು ಭಿನ್ನಮತ ಆರಂಭಿಸಿವೆ. ಬಿಜೆಪಿಯ ಈ ನಿರ್ಧಾರವನ್ನು ಪಾಲಿಸಲು ಸಾಧ್ಯವಿಲ್ಲ ಎಂದು ಗೋವ ಫಾರ್ವರ್ಡ್ ಪಾರ್ಟಿಯ ನಿಲುವು ಆಗಿದೆ.

ಗೋವಾದ 40 ಶಾಸಕರಲ್ಲಿ 16 ಶಾಸಕರನ್ನು ಹೊಂದಿರುವ ಕಾಂಗ್ರೆಸ್ ವಿಧಾನಸಭೆಯಲ್ಲಿ ಹೆಚ್ಚು ಶಾಸಕರನ್ನು ಹೊಂದಿದ ಪಕ್ಷವಾಗಿದೆ. ಸರಕಾರ ರಚಿಸಲು 21ಶಾಸಕರ ಅಗತ್ಯವಿದೆ. ಈಗ ಕಾಂಗ್ರೆಸ್ಸಿಗರ ಅಸಹಕಾರ ಕಾಂಗ್ರೆಸ್ಸಿಗೆ ಹಿನ್ನಡೆಯಾಗಲಿದ್ದು, ಬಿಜೆಪಿ ವಿಶ್ವಾಸ ಮತದ ತೂಗುಕತ್ತಿಯಿಂದ ಪಾರಾಗುವ ಸಾಧ್ಯತೆ ಗೋಚರಿಸಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

Leave a Reply