ಚೆನ್ನೈ: ರಾಜಕೀಯ ಪ್ರವೇಶದಲ್ಲಿ ಅತಿ ಸೂಕ್ಷ್ಮವಾಗಿ ಪ್ರತಿಯೊಂದು ಹೆಜ್ಜೆಯನ್ನು ಕಮಲ್ ಹಾಸನ್ ಎತ್ತಿಡುತ್ತಿದ್ದಾರೆ. ಲೋಕಸಭಾ ಚುನಾವಣೆಯ ಮೊದಲು ತಮಿಳ್ನಾಡಿನಲ್ಲಿ ಜನಸಂಪರ್ಕ ಕಾರ್ಯಕ್ರಮಗಳಿಗೆ ಕಮಲ್ ಹಾಸನ್ ಚಾಲನೆ ನೀಡಿದ್ದಾರೆ. ಮಕ್ಕಳ್ ನೀತಿಮಯ್ಯಂ ಅಧ್ಯಕ್ಷರಾಗಿರುವ ಕಮಲ್ ಹಾಸನ್ ತಮಿಳ್ನಾಡಿನ ಪಶ್ಚಿಮದ ಜಿಲ್ಲೆಗಳಲ್ಲಿ ಪ್ರವಾಸ ಆರಂಭಿಸಿದ್ದಾರೆ. ಕಮಲ್‍ ಹಾಸನ್‍ರ ಚುನಾವಣಾ ತಂತ್ರಗಳಿಗೆ ರೂಪು ನೀಡುತ್ತಿರುವುದು ಅಮೆರಿಕದ ಡೊನಾಲ್ಡ್ ಟ್ರಂಪ್‍ರ ಕೊನೆ ಹಂತದ 45 ದಿವಸಗಳ ಚುನಾವಣಾ ಪ್ರಚಾರಕ್ಕೆ ಚುಕ್ಕಾಣಿ ಹಿಡಿದಿದ್ದ ಆಂಧ್ರದ ಅವಿನಾಶ್ ಉರಗವರಪು ಆಗಿದ್ದಾರೆ. ಈ ವಿಷಯವನ್ನು ಕೊಯಮತ್ತೂರಿನಲ್ಲಿ ಸ್ವಯಂ ಕಮಲಹಾಸನ್ ಬಹಿರಂಗಪಡಿಸಿದ್ದಾರೆ.

ಕಮಲ್‍ಹಾಸನ್‍ರ ಭ್ರಷ್ಟಾಚಾರ ವಿರುದ್ಧ ಘೋಷಣೆಗಳನ್ನು ಯುವಕರಿಗೆ ತಲುಪಿಸುವುದರೊಂದಿಗೆ ಮಾದರಿ ಗ್ರಾಮಗಳನ್ನು ಸೃಷ್ಟಿಸುವ ಪ್ರಚಾರ ರೀತಿಯನ್ನು ಅಸ್ತ್ರವನ್ನಾಗಿ ಬಳಸುವ ಪ್ರಯತ್ನ ಆರಂಭವಾಗಿದೆ.ಇತರ ರಾಜಕೀಯ ಪಕ್ಷಗಳಿಂದ ಭಿನ್ನವಾಗಿ ಕಮಲ್ ಹಾಸನ್ ಜನರನ್ನು ಆಕರ್ಷಿಸುತ್ತಿದ್ದಾರೆ. ಲಕ್ನೊ ಐಐಎಂ ಇಲಕ್ಟ್ರಿಕ್ ಇಂಜಿನಿಯರಿಂಗ್ ಪದವೀಧರ ಅವಿನಾಶ್‍ರನ್ನು ಅಮೆರಿಕದ ಚುನಾವಣೆಯಲ್ಲಿ ಗೆದ್ದ ಬಳಿಕ ಅಧ್ಯಕ್ಷ ಟ್ರಂಪ್ ವಿಶೇಷವಾಗಿ ಅಭಿನಂದಿಸಿದ್ದರು.

ಪ್ರಧಾನ ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿ ಸಂಘಟನಾ ಕಾರ್ಯವನ್ನು ಬಲಪಡಿಸುವುದರೊಂದಿಗೆ ಕ್ಯಾಂಪಸ್ ಮೂಲಕ ವಿದ್ಯಾರ್ಥಿಗಳೆಡೆಗೆ ತಲುಪಲು ಕಮಲ್ ಹಾಸನ್ ಪ್ರಯತ್ನಿಸುತ್ತಿದ್ದಾರೆ. ಸ್ಥಳೀಯ ಚುನಾವಣೆಗಳಲ್ಲಿ ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ಸ್ಪರ್ಧಿಸುವುದಿಲ್ಲ ಎಂದು ಕಮಲ್ ಹಾಸನ್ ಘೋಷಿಸಿದ್ದು, ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದಾಗಿ ಹೇಳಿದ್ದಾರೆ.

Leave a Reply