ಹೊಸದಿಲ್ಲಿ: ಬೇಹುಗಾರಿಕೆ ತಂಡದ ಕೊಂಡಿಯೆಂದು ಶಂಕಿಸಲಾದ ಚೀನದ ಪ್ರಜೆಯೊಬ್ಬನನ್ನು ದಿಲ್ಲಿಯಲ್ಲಿ ಬಂಧಿಸಲಾಗಿದೆ. ಚಾರ್ಲಿಪೆಂಗ್(39) ಎಂಬ ಚೀನದ ವ್ಯಕ್ತಿಯನ್ನು ಸೆಪ್ಟಂಬರ್ 13 ರಂದು ದಿಲ್ಲಿಯ ಮಂಜು ಕಾಟಿಲ್ಲ ಕಾಲನಿಯಿಂದ ಪೊಲೀಸರು ಸೆರೆ ಹಿಡಿದಿದ್ದರು.

ಭಾರತದ ಪಾಸ್‍ಪೋರ್ಟ್, ಆಧಾರ್ ಕಾರ್ಡ್, 3.5 ಲಕ್ಷರೂಪಾಯಿ ಈತನಿಂದ ವಶಪಡಿಸಿ ಕೊಳ್ಳಲಾಗಿದೆ. ಭಾರತದ ರೂಪಾಯಿಯಲ್ಲದೆ 2000 ಅಮೆರಿಕನ್ ಡಲರ್, 2000 ರೂಪಾಯಿ ಮೌಲ್ಯದ ಥಾಯ್ ಕರೆನ್ಸಿ ಕೂಡ ಈತನಲ್ಲಿತ್ತು ಎಂದು ಪೊಲೀಸರು ಹೇಳಿದ್ದಾರೆ.

ಗುಡ್‍ಗಾವ್‍ನಲ್ಲಿ ಪೆಂಗ್‍ ವಾಸವಿದ್ದ ಮನೆಯಿಂದ ಹಲವಾರು ದಾಖಲೆಗಳು,ಎಸ್‍ ಯು ವಿ ವಶಪಡಿಸಿಕೊಳ್ಳಲಾಗಿದ್ದು,ಇದರಿಂದ ಪೆಂಗ್ ಗೂಢಚಾರ ಎನ್ನುವುದು ಸಾಬೀತುಗೊಂಡಿದೆ. ಗುಡ್‍ಗಾವ್‍ನ ಮನೆಯನ್ನು ಕಚೇರಿಯನ್ನಾಗಿ ಪರಿವರ್ತಿಸಿಕೊಂಡಿದ್ದನು ಮತ್ತು ಅಲ್ಲಿ ವಿದೇಶಿ ಕರೆನ್ಸಿ ಬಿಸಿನೆಸ್ ಆತ ಮಾಡುತ್ತಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.

ಭಾರತಕ್ಕೆ ಐದುವರ್ಷ ಹಿಂದೆ ಪೆಂಗ್ ಬಂದಿದ್ದಾನೆ. ಅಂದಿನಿಂದ ಆತ ಈಶಾನ್ಯ ರಾಜ್ಯಗಳಲ್ಲಿ ಸಂಚರಿಸುತ್ತಾ ಬಂದಿದ್ದಾನೆ ,ಹಿಮಾಚಲ ಪ್ರದೇಶಕ್ಕೂ ಭೇಟಿ ನೀಡುತ್ತಿದ್ದನು. ಭಾರತದ ಯುವತಿಯನ್ನು ಮದುವೆಯಾಗಿದ್ದು ಮಣಿಪುರದಿಂದ ಪಾಸ್‍ಪೋರ್ಟು ಮಾಡಿಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply