ನಾಳೆಯೇ ನಿಮ್ಮ ಕೊನೆಯ ದಿನವೆಂಬಂತೆ ತೀವ್ರವಾಗಿ ಬದುಕಿರಿ. ಆದರೆ ಏನನ್ನಾದರೂ ಕಲಿಯುವಾಗ ಮಾತ್ರ “ನಾನು ಎಂದೆಂದಿಗೂ ಬದುಕಿರುತ್ತೇನೆ” ಎನ್ನುವ ಭಾವನೆಯಿಂದ ಕಲಿಯಿರಿ.

– ಮಹಾತ್ಮ ಗಾಂಧಿ

ಎರಡು ರೀತಿಯಲ್ಲಿ ನಾವು ಬದುಕಬಹುದು. ಜಗತ್ತಿನಲ್ಲಿರುವ ಯಾವುದರಲ್ಲೂ ಏನೂ ಪವಾಡವಿಲ್ಲ ಎಂದು ತಿಳಿದು ಬದುಕಬಹುದು. ಅಥವಾ ನಮ್ಮ ಸುತ್ತಲಿರುವ ಎಲ್ಲದರಲ್ಲೂ ಪವಾಡಗಳನ್ನು ಕಾಣುತ್ತಾ ಬದುಕಬಹುದು. ಯಾವುದು ಸರಿ ಅನ್ನುವುದು(ಆಯ್ಕೆ) ನಮಗೇ ಸೇರಿದ್ದು!

– ಆಲ್ಬರ್ಟ್ ಐನ್‍ಸ್ಟೈನ್

ನೀವು ಮಾಡಿದ ತಪ್ಪಿನ ಅರಿವಾದಾಗ ತಿದ್ದಿಕೊಳ್ಳಲು ಕೂಡಲೇ ಯತ್ನಿಸಿ.

-ದಲೈಲಾಮ

ನಗುವುದು ಸಹಜ ಧರ್ಮ, ನಗಿಸುವುದು ಪರರ ಧರ್ಮ, ನಗಿಸಿ ನಗುತ ಬಾಳುವುದು ಅದವೇ ಮಾನವಧರ್ಮ.

-ಡಿ.ವಿ.ಗುಂಡಪ್ಪ

ನೀವೇಷ್ಟು ವರ್ಷ ಬದುಕುತ್ತೀರಿ ಎನ್ನುವುದು ಮುಖ್ಯವಲ್ಲ.
ನೀವಿರುವ ವರ್ಷಗಳಲ್ಲಿ ಬದುಕೆಷ್ಟಿದೆ ಎನ್ನುವುದೇ ಮುಖ್ಯ.

– ಅಬ್ರಹಾಂ ಲಿಂಕನ್

ದ್ವೇಷಕ್ಕೆ ಸಮಯ ಕೊಡುವುದು ಆತ್ಮಹತ್ಯೆಯ ಯೋಚನೆಗೆ ವ್ಯಯಿಸುವುದಕ್ಕೆ ಸಮ.

– ಸೂಫಿ ಸನಾಯಿ

ಆರೋಗ್ಯವೇ ಉತ್ತಮ ಉಡುಗೊರೆ.
ಕಾರುಣ್ಯತೆಯೇ ಉತ್ತಮ ಸಂಪತ್ತು ಮತ್ತು
ವಿಶ್ವಾಸಾರ್ಹತೆಯೇ ಉತ್ತಮ ಬಾಂಧವ್ಯ.


– ಗೌತಮ ಬುದ್ಧ

ಯಾವುದನ್ನು ಮಾಡಲು ನಮಗೆ ಅರ್ಹತೆ ಇರುವುದಿಲ್ಲವೋ ಅದಕ್ಕಾಗಿ ಸಮಯ ವ್ಯಯಿಸಬಾರದು.
– ಚಾಣಕ್ಯ

ಪ್ರಾರ್ಥನೆ ಹೃದಯದ ಸಂಗೀತ
– ಜಿಬ್ರಾನ್

ಸತ್ಯವನ್ನು ಎಲ್ಲಾ ಕಡೆಯಿಂದಲೂ ಪರಾಮರ್ಶಿಸಿ ನೋಡು.

-ಶ್ರೀ ರಾಮಕೃಷ್ಣ ಪರಮಹಂಸರು

ಒಂದು ಪಕ್ಷಿ ಅಥವಾ ಅದಕ್ಕಿಂತಲೂ ಸಣ್ಣ ಯಾವುದಾದರೂ ಜೀವಿಯನ್ನು ಯಾರಾದರೂ ಅನ್ಯಾಯವಾಗಿ ವಧಿಸಿದರೆ ಅಲ್ಲಾಹನು ಪುನರುತ್ಥಾನ ದಿನ ಅವನೊಡನೆ ಆ ಕುರಿತು
ವಿಚಾರಣೆ ಮಾಡುವನು.

-ಪ್ರವಾದಿ ಮುಹಮ್ಮದ್

ನೀನ್ನ ನೆರೆಹೊರೆಯವರನ್ನು ಪ್ರೀತಿಸು. ದೇವರನ್ನು ಪೂರ್ಣ ಮನಸ್ಸಿನಿಂದ, ಆತ್ಮನಿಂದ, ಹಾಗೂ ಸತ್ಯದಿಂದ ಆರಾಧಿಸು.

– ಏಸು ಕ್ರಿಸ್ತ

Leave a Reply