ಮೊಬೈಲ್ ಗಳಿಗೆ ಪಾಸ್ ಕೋಡ್ ಹಾಕಿ ಇಡುವುದು ಇಂದಿನ ಕಾಲದಲ್ಲಿ ತುಂಬಾ ಅಗತ್ಯ. ಯಾಕೆಂದರೆ ವಾಟ್ಸಾಪ್ ಸೋಶಿಯಲ್ ಮೀಡಿಯಾ ಮೂಲಕ ಯಾವ ರೀತಿಯ ವಿಡಿಯೋ ಗಳು ನಮಗೆ ಬರುತ್ತದೆ ಅದನ್ನು ಸಣ್ಣ ಮಕ್ಕಳು ಎತ್ತಿ ನೋಡುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಆದ್ದರಿಂದ ಆಪ್ ಗಳಿಗೆ ಫೋನ್ ಗಳಿಗೆ ಪಾಸ್ವರ್ಡ್ ಹಾಕುವುದು ಒಳ್ಳೆಯದು. ಒಂದು ವೇಳೆ ಮೊಬೈಲ್ ಕಾಣೆಯಾದರೂ ಇದು ಒಂದು ರೀತಿಯಲ್ಲಿ ಸುರಕ್ಷಿತ ಮಾರ್ಗವಾಗಿದೆ.

ಬೆಂಗಳೂರಿನಿಂದ 15 ವರ್ಷದ ಬಾಲಕನೊಬ್ಬ ತನ್ನ ತಂದೆಯ ಸ್ಮಾರ್ಟ್‌ಫೋನ್ ಆಟವಾಡಲು ಪಡೆಡಿದ್ದು ಅದರಲ್ಲಿ ಅಪ್ಪನ ಹಗರಣ ಬಯಲಾದ ಘಟನೆ ಹೊರಬಿದ್ದಿದೆ. ಈ ಫೋನ್ ರೆಕಾರ್ಡರ್ ಮತ್ತು ವಾಟ್ಸಾಪ್ ನಲ್ಲಿ ಹುಡುಗನ ತಂದೆ ಮಹಿಳೆಯ ಜೊತೆ ನಡೆಸಿದ ಹಲವಾರು ಸಂದೇಶಗಳು ರೆಕಾರ್ಡ್ ಆಗಿತ್ತು. ಇದನ್ನು ಮಗ ನೋಡಿದ್ದಾನೆ.

ಮಾತ್ರವಲ್ಲ ಈ ಬಗ್ಗೆ ತಾಯಿಗೆ ಸಾಕ್ಷ್ಯ ಸಹಿತ ತೋರಿಸಿದ್ದು ದಂಪತಿಗಳ ಮಧ್ಯೆ ಈ ಸಂಬಂಧ ತಕರಾರು ಉಂಟಾಗಿದ್ದು ಆತ ಪತ್ನಿಯ ಮೇಲೆ ಹಲ್ಲೆ ಮಾಡಿದ್ದಾನೆ. ಮಾತ್ರವಲ್ಲ ಈ ಬಗ್ಗೆ ಯಾರಿಗೂ ಹೇಳಬಾರದು ಎಂದು ಬೆದರಿಕೆ ಹಾಕಿದ್ದಾನೆ ಎಂದು ವರದಿಯಾಗಿದೆ. ಈ ಬಗ್ಗೆ ಪತ್ನಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಆರೋಪಗಳನ್ನು ದಾಖಲಿಸಿದ್ದಾಳೆ.

ಯಾವುದೇ ಹಗರಣ ಇರಲಿ ಇಲ್ಲದಿರಲಿ ಫೋನ್ ಅಥವಾ ಆಪ್ ಗಳಿಗೆ ಪಾಸ್ ಕೋಡ್ ಹಾಕಿಡುವುದು ಉತ್ತಮವಾಗಿದೆ.

Leave a Reply