ನವದೆಹಲಿ : ಭಾರತೀಯ ರೈಲ್ವೆಯಲ್ಲಿ ಪ್ರಯಾಣಿಸುವುದು ಅಪಾಯಕಾರಿಯಾಗಿ ಪರಿಣಮಿಸಿದ್ದು, ಒಂದಲ್ಲ ಒಂದು ಘಟನೆಯ ವರದಿ ಕೇಳುತ್ತಾ ಇರುತ್ತೇವೆ. ಇದೀಗ ಯಾತ್ರಿಕರ ಸಾಮಾನು ಸಾರಾಂಜಾಮುಗಳನ್ನು ಕಳ್ಳರು ಕದ್ದಿದು, ಇದೊಂದು ದೊಡ್ಡ ಮಟ್ಟದ ಕಳ್ಳತನ ಎಂದು ವರದಿಯಾಗಿದೆ.

ಮುಂಬೈ ಯಿಂದ ದಿಲ್ಲಿಗೆ ಹೋಗುತ್ತಿದ್ದ ಅಗಸ್ತ್ ರಾಜಧಾನಿ ಎಕ್ಸ್ಪ್ರೆಸ್ ಟ್ರೈನ್ ನಲ್ಲಿ ಈ ಕಳ್ಳತನವಾಗಿದೆ. ರಾಜಸ್ತಾನದ ಕೋಟಾದ ಬಳಿ ಯಾತ್ರಿಕರ ಸಾಮಾನು ಲಗ್ಗೇಜುಗಳು ಟ್ರೈನ್ ನಿಂದ ಮಾಯವಾಗಿದ್ದು, ವಿವಿಧ ಭೋಗಿಗಳಿಂದ ಲಗ್ಗೇಜುಗಳು ಕಳ್ಳತನತವಾಗಿದ್ದು, ನಂತರ ಯಾತ್ರಿಕರು ಗಲಾಟೆ ಮಾಡಿದ್ದು, ಆರ್ ಪಿ ಎಫ್ ದೂರು ದಾಖಲಿಸಿದೆ.

ನನ್ನ ಸಂಪೂರ್ಣ ಪರ್ಸ್ ಕದ್ದಿದ್ದಾರೆ. ಪಾಸ್ ಪೋರ್ಟ್, ಆಧಾರ್ ಕಾರ್ಡ್ ಹದಿನೆಂಟು ಸಾವಿರ ರೂಪಾಯಿ ಅದರಲ್ಲಿತ್ತು. ಅದನ್ನು ನಾನು ಮೂರು ಕಡೆಯಲ್ಲಿ ಇಟ್ಟಿದ್ದೆ ಎಲ್ಲವನ್ನೂ ಕದ್ದಿದ್ದಾರೆ ಎಂದು ಯಾತ್ರಿಕರಾದ ಮಲ್ಕಾ ಜೈನ್ ಮಾಧ್ಯಮದೊಂದಿಗೆ ಅಳಲನ್ನು ತೋಡಿಕೊಂಡಿದ್ದಾರೆ.

ನಮ್ಮ ಹಣ ಕಳ್ಳತನವಾದಾಗ ಅರ್ಧ ಗಂಟೆಯವರೆಗೆ ಯಾರೂ ನಮ್ಮನ್ನು ಸಂಪರ್ಕಿಸಲು ಬಂದಿಲ್ಲ. ಅಟೆಂಡೆಂಟ್ ರನ್ನು ಕರೆದು ನೀವೆಲ್ಲಿ ಇದ್ದೀರಿ ಎಂದು ವಿಷಯ ಕೇಳಿದಾಗ ಅವರ ಬಳಿ ಏನೂ ಉತ್ತರವಿಲ್ಲ. ಸುಮಾರು ಏಳೆಂಟು ಭೋಗಿಗಳಲ್ಲಿ ಈ ಕಳ್ಳತನ ವಾಗಿರಬಹುದು ಎಂದು ಮತ್ತೊಬ್ಬರು ಯಾತ್ರಿಕರು ಹೇಳಿದ್ದಾರೆ.

ಪ್ರತಿವರ್ಷ ಕಳ್ಳರ ಕಾಟದಿಂದ ಭಾರತೀಯ ರೈಲ್ವೆಗೆ ಕೋಟ್ಯಂತರ ರೂಪಾಯಿ ನಷ್ಟ ಆಗುತ್ತದೆ. ಕಳೆದ ವರ್ಷ ೨.೫ ಕೋಟಿ ನಷ್ಟ ಆಗಿದೆ. ಟವೆಲ್ , ಬೆಡ್ಶೀಟ್, ಕಂಬಳಿ ಎಲ್ಲವನ್ನೂ ಕೆಲವರು ಕದ್ದು ಕೊಂಡೊಯ್ಯುತ್ತಾರೆ ಎಂದು ಓರ್ವ ರೈಲ್ವೆ ಅಧಿಕಾರಿ ಹೇಳಿದ್ದಾರೆ.

source : https://khabar.ndtv.com/video/show/news/robbery-on-mumbai-delhi-rajdhani-express-465449

 

Leave a Reply