ದೆಹಲಿಯಲ್ಲಿ ಕೆಲವರಿಂದ ಥಳಿತಕ್ಕೊಳಗಾಗಿ ಹತನಾದ ಎಂಟರ ಪ್ರಾಯದ ಮದ್ರಸ ವಿಧ್ಯಾರ್ಥಿ ಅಝೀಮ್ ಮೃತದೇಹವನ್ನು ಸಾರ್ವಜನಿಕ ದರ್ಶನಕ್ಕೆ ಇಡಲು ಪೋಲೀಸರು ಅನುಮತಿ ನೀಡಲಿಲ್ಲ.

ಶಾಂತಿ ಭಂಗವಾಗುತ್ತದೆಯೆಂದು ಕಾರಣ ನೀಡಿ ಪೋಲೀಸರು ಅನುಮತಿ ನೀಡಲಿಲ್ಲ. ಬಿಗಮ್ ಪುರದ ಜಾಮಿಯಾ ಫರೀದದ ಬಳಿಯ ಮಸೀದಿಯಲ್ಲಿ ನಡೆದ ಜನಾಝ ನಮಾಝ್ ಮತ್ತು ಅಂತಿಮ ಕ್ರಿಯೆಗೆ ಭಾರಿ ಜನರು ಸೇರಿದ್ದರು. ಕೊಲೆಗೈದ ನಾಲ್ವರು ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದೆ. ಕೊಲೆ ನಡೆದ ಸ್ಥಳದಲ್ಲಿ ಪೋಲೀಸ್ ಕಾವಲು ಏರ್ಪಡಿಸಲಾಗಿದೆ.

ಮದ್ರಸಾದ ಹಾಸ್ಟೆಲ್ ನಲ್ಲಿ ಕಲಿಯುತ್ತಿರುವ ಕೆಲವು ವಿದ್ಯಾರ್ಥಿಗಳು ಮದ್ರಸಾದ ಬಳಿಯಲ್ಲಿರುವ ಖಾಲಿ ಜಾಗದಲ್ಲಿ ಕ್ರಿಕೆಟ್ ಆಡುತ್ತಿದ್ದಾಗ ಅಲ್ಲಿಗೆ ಬಂದ ಸ್ಥಳೀಯ ಯುವಕರ ಗುಂಪೊಂದು ಮೈದಾನದ ಇನ್ನೊಂದು ಬದಿಗೆ ಸರಿಯುವಂತೆ ತಿಳಿಸಿದಾಗ ಮದ್ರಸಾ ವಿದ್ಯಾರ್ಥಿಗಳು ನಿರಾಕರಿಸಿದ ಹಿನ್ನೆಲೆಯಲ್ಲಿ ಯುವಕರ ಗುಂಪು ಅಝೀಮ್ ನನ್ನು ದೂರಕ್ಕೆ ತಳ್ಳಿದ ಪರಿಣಾಮ ನೆಲಕ್ಕೆ ಬಿದ್ದದ್ದರಿಂದ ಪ್ರಜ್ಞಾಹೀನನಾದರು ಘಟನಾ ನಂತರ ಮೈದಾನದಲ್ಲಿದ್ದ ಇತರ ವಿದ್ಯಾರ್ಥಿಗಳು ಕೂಡಲೇ ಮದ್ರಸಾಕ್ಕೆ ಓಡಿಹೋಗಿ, ಅಧ್ಯಾಪಕರಿಗೆ ವಿಷಯ ಮುಟ್ಟಿಸಿದ ಬಳಿಕ ಕೂಡಲೇ ಅಝೀಮ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಯಿತಾದರೂ ಸಂಜೆಯ ವೇಳೆ ಬಾಲಕ ಮೃತಪಟ್ಟಿರುವ ಬಗ್ಗೆ ಮಾಹಿತಿ ನೀಡಲಾಯಿತು.

Leave a Reply