ಬಾಲಿವುಡ್ ಬಿಗ್ ಬಿ ಎಂದೇ ಖಾತಿ ಹೊಂದಿರುವ ಅಮಿತಾಬ್ ಬಚ್ಚನ್ ಹುತಾತ್ಮ ಯೋಧರ ಕುಟುಂಬಕ್ಕೆ ಒಂದು ಕೋಟಿ ರೂಪಾಯಿ ಮತ್ತು ಸಾಲದಲ್ಲಿ ಸಂಕಷ್ಟದಲ್ಲಿರುವ ರೈತರಿಗೆ ೧. ಕೋಟಿ ರೂ. ನೆರವು ನೀಡುವುದಾಗಿ ಘೋಷಿಸಿದ್ದಾರೆ.

ಈ ನಿಟ್ಟಿನಲ್ಲಿ ಟ್ವೀಟ್ ಮಾಡಿದ ಅಮಿತಾಭ್ ಯಸ್ ಐ ಕ್ಯಾನ್ ಅಂಡ್ ಐ ವಿಲ್ ಎಂದು ತಾನು ರೈತರಿಗೆ ಮತ್ತು ಹುತಾತ್ಮ ಯೋಧರ ಕುಟುಂಬಕ್ಕೆ ನೀಡುತ್ತಿದ್ದೇನೆ ಎಂಬ ಟ್ವೀಟ್ ಗೆ ಪ್ರಶಂಸೆಯ ಸುರಿಮಳೆ ಬಂದಿದೆ.

44 ಹುತಾತ್ಮ ಯೋಧರ ಪಟ್ಟಿ ಸರಕಾರದಿಂದ ಸಿಕ್ಕಿದ್ದು ಒಟ್ಟು ಒಂದು ಕೋಟಿ ಮೊತ್ತದ ೧೧೨ ಡ್ರಾಫ್ಟ್ ಗಳನ್ನೂ ಮಾಡಿ ಯೋಧರ ಕುಟುಂಬಗಳಿಗೆ ನೀಡಲಾಗುವುದು. ಹಾಗೆಯೇ ಸಾಲದಲ್ಲಿ ಮುಳುಗಿರುವ ಸುಮಾರು 200 ಮಂದಿ ರೈತರಿಗೂ ನೆರವು ನೀಡುವುದಾಗಿ ಕೌನ್ ಬನೇಗಾ ಕರೋಡ್ ಪತಿ 10 ನೇ ಆವೃತ್ತಿಯ ಸುದ್ದಿ ಗೋಷ್ಠಿಯಲ್ಲಿ ಅವರು ಘೋಷಿಸಿದ್ದಾರೆ.

ವೈಜಾಗ್ ನಲ್ಲಿ ಶೂಟಿಂಗ್ ವೇಳೆ ರೈತರು ಸಣ್ಣ ಮೊತ್ತದ ಸಾಲಕ್ಕಾಗಿ ಆತ್ಮ ಹತ್ಯೆ ಮಾಡುವ ಸುದ್ದಿ ಕೇಳಿ ತುಂಬಾ ನೊಂದು ಕೊಂಡಿದ್ದೇನೆ. ಅಲ್ಲಿಂದ ಬಂದು ಸುಮಾರು 50 ರೈತ ಕುಟುಂಬಗಳ ಸಾಲವನ್ನು ಮರು ಪಾವತಿಸಿದ್ದೆ ಎಂದು ಬಿಗ್ ಬಿ ಹೇಳಿದ್ದಾರೆ.

Leave a Reply