ಮಹೀಂದ್ರಾ ಸಮೂಹದ ಅಧ್ಯಕ್ಷರಾದ ಆನಂದ್ ಮಹೀಂದ್ರಾ ಪ್ರತಿ ಬಾರಿ ಜನ ಸಾಮಾನ್ಯರ ಸ್ಮಾರ್ಟ್ ಆವಿಷ್ಕಾರಗಳ ಚಿತ್ರ ವಿಡಿಯೋಗಳನ್ನು ಟ್ವಿಟರ್ ನಲ್ಲಿ ಪೋಸ್ಟ್ ಮಾಡುತ್ತಾ ಇರುತ್ತಾರೆ. ಅವುಗಳಲ್ಲಿ ವಿಶಿಷ್ಟವಾದವರಿಗೆ ಉಡುಗೊರೆಯನ್ನೂ ನೀಡುತ್ತಾರೆ. ಈ ಹಿಂದೆ ಆಟೋವನ್ನು ಮಹೀಂದ್ರಾ ಸ್ಕಾರ್ಪಿಯೋ ಆಗಿ ಪರಿವರ್ತಿಸಿದ ವ್ಯಕ್ತಿಯ ಅಟೋ ಪಡೆದು ಮಹೀಂದ್ರಾ ಸ್ಕಾರ್ಪಿಯೋ ಮೂಸಿಯಂ ನಲ್ಲಿ ಇಟ್ಟು ಅವರಿಗೆ ಬೇರೆ ಮಹೀಂದ್ರಾ ವಾಹನ ಉಡುಗೊರೆಯಾಗಿ ನೀಡಿದ್ದು ಸುದ್ದಿಯಾಗಿತ್ತು.

ಈ ಗುರುವಾರ ಅವರು ವಿಶೇಷವಾದ ವಿಡಿಯೋವೊಂದು ಶೇರ್ ಮಾಡಿದ್ದು, ಇದರಲ್ಲಿ ನ್ಯೂಯಾರ್ಕ್ ಪೊಲೀಸ್ ಅಧಿಕಾರಿಯೊಬ್ಬ ಗರ್ಬಾ ಡ್ಯಾನ್ಸ್ ಮಾಡುತ್ತಿದ್ದಾರೆ. ಈ ವಿಡಿಯೋ ಶೇರ್ ಮಾಡುತ್ತಾ ಅವರು, ನಾನು ಹಲವಾರು ಗರ್ಬಾ ಡ್ಯಾನ್ಸ್ ವಿಡಿಯೋ ಗಳನ್ನು ಶೇರ್ ಮಾಡಿದ್ದೇನೆ. ಆದ್ದರಿಂದ ನನ್ನ ಹೆಸರನ್ನು ಆನಂದ್ ಗಾರ್ಬಿನ್ದ್ರಾ ಬದಲಿಸುವರೇ ಎನ್ನುವ ಭಯವಿದೆ. ಆದರೆ ಈ ವಿಡಿಯೋ ಪೋಸ್ಟ್ ಮಾಡದೇ ಇರಲು ನನ್ನಿಂದ ಸಾಧ್ಯವಾಗಲಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.

Leave a Reply