ಆಮ್ ಆದ್ಮಿ ಪಕ್ಷದ ರೋಡ್ ಶೋ ವೇಳೆ ಕಪ್ಪು ಬಾವುಟ ಪ್ರದರ್ಶನ ಮಾಡಿದ ಘಟನೆ ವರದಿಯಾಗಿದೆ. ಆಮ್ ಆದ್ಮಿ ಪಕ್ಷದ ಪಂಜಾಬ್ ನ ಸಂಗ್ರೂರ್ ಅಭ್ಯರ್ಥಿ ಭಗವಂತ್ ಮಾನ್ ರವರ ರೋಡ್ ಶೋ ವೇಳೆ ಕೆಲವರು ಕಪ್ಪು ಬಾವುಟ ತೋರಿಸಿದ್ದು, ಈ ವೇಳೆ ಇದಕ್ಕೆ ಉತ್ತರವಾಗಿ ಮಾನ್ ರವರು ತಮ್ಮ ವಾಹನದ ಮೇಲೇರಿ ಬಾಂಗ್ರಾ ಡ್ಯಾನ್ಸ್ ಮಾಡಲು ತೊಡಗಿದರು ಮತ್ತು ಕಪ್ಪು ಬಾವುಟ ಪ್ರದರ್ಶಕರ ಮೇಲೆ ಹೂ ಮಳೆಗೈದರು. ಬಳಿಕ ಈ ಬಗ್ಗೆ ಪ್ರತಿಕ್ರಿಯೆ ವ್ಯಕ್ತ ಪಡಿಸಿದ ಅವರು, ಇದೊಂದು ರಾಜಕೀಯ ವಿರೋಧಿಗಳ ಕೆಲಸವಾಗಿದ್ದು, ಇವರು ಕಾಂಗ್ರೆಸ್ ಸೂಚನೆಯಂತೆ ಮಾಡಿದ್ದಾರೆ ಎಂದು ಆರೋಪಿಸಿದರು..

Leave a Reply