ನವದೆಹಲಿ: ದಿನೇ ದಿನೇ ಉಲ್ಬಣಗೊಳ್ಳುತ್ತಿರುವ ಬೆಲೆಯೇರಿಕೆ ಬಗ್ಗೆ ಬಾಬಾ ರಾಮ್ ದೇವ್ ಮೋದಿ ಸರಕಾರವನ್ನು ಎಚ್ಚರಿಸಿದ್ದಾರೆ. ಇದು ಮೋದಿ ಸರಕಾರಕ್ಕೆ ಮುಳುವಾಗಲಿದ್ದು, ಸರ್ಕಾರ ಸೇವಾ ತೆರಿಗೆ ರಿಯಾಯಿತಿ ನೀಡಿದರೆ ತಾವು ಕಡಿಮೆ ಬೆಲೆಯಲ್ಲಿ ಪೆಟ್ರೋಲ್ ಡೀಸೆಲ್ ಪೂರೈಸುವುದಾಗಿ ಅವರು ಹೇಳಿದ್ದಾರೆ.

ಒಂದು ವೇಳೆ ಸರ್ಕಾರ ತೆರಿಗೆ ಹೊರೆ ಇಳಿಸಿದರೆ ಪೆಟ್ರೋಲ್ ಡಿಸೇಲ್ ಅನ್ನು 35-40 ರೂಪಾಯಿ ಗಳಿಗೆ ಸರಬರಾಜು ಮಾಡಲು ಸಾಧ್ಯ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಪೆಟ್ರೋಲಿಯಂ ಉತ್ಪನ್ನ ಗಳಿಗೆ ಜಿಎಸ್ಟಿ ವ್ಯಾಪ್ತಿಗೆ ತರಬೇಕಾಗಿದೆ. ಆದರೆ ಶೇ 28. ತೆರಿಗೆ ಮಟ್ಟಕ್ಕಲ್ಲ ಎಂದು ಹೇಳಿದ ಅವರು, ಮೋದಿ ಸರಕಾರ ತಕ್ಷಣ ಈ ಬಗ್ಗೆ ಎಚ್ಚೆತ್ತು ಕೊಳ್ಳಬೇಕು ಇಲ್ಲದಿದ್ದರೆ ಇದಕ್ಕೆ ದುಬಾರಿ ಬೆಲೆ ತೆರಬೇಕಾದೀತು ಎಂದು ಎಚ್ಚರಿಸಿದರು.

ಮೋದಿಯವರನ್ನು ಟೀಕಿಸುವ ಅನೇಕರಿದ್ದಾರೆ, ಆದರೆ ಅವರು ಸ್ವಚ್ಛ ಭಾರತ ಅಭಿಯಾನ, ಹಗರಣ ಮುಕ್ತ ಆಡಳಿತದಂತಹ ಕೆಲವು ಒಳ್ಳೆಯ ಕಾರ್ಯವನ್ನೂ ಮಾಡಿದ್ದಾರೆ. ರಫೆಲ್ ವ್ಯವಹಾರದಲ್ಲಿ ಅನುಮಾನ ವ್ಯಕ್ತವಾಗಿದ್ದು ಅದನ್ನು ಸರಕಾರ ಬಗೆಹರಿಸಬೇಕು ಎಂದು ವಿಶ್ಲೇಷಣೆ ನಡೆಸಿದರು.

ನಾನು ವೈಜ್ಞಾನಿಕ ಸನ್ಯಾಸಿ, ದೇಶದ ಯುವ ಜನತೆ ಹತಾಶೆಯನ್ನು ಮೆಟ್ಟಿ ನಿಲ್ಲಬೇಕು. ನಾನು ಎಲ್ಲ ಪಕ್ಷದೊಂದಿಗೆ ಇದ್ದೇನೆ. ಯಾವುದೇ ನಿರ್ದಿಷ್ಟ ಪಕ್ಷದೊಂದಿಗೆ ಗುರುತಿಸಿಕೊಂಡಿಲ್ಲ ಎಂದು ಹೇಳಿದರು.

Leave a Reply