ಧರ್ಮದ ಹೆಸರಿನಲ್ಲಿ ಜನರು ಜಗಳಾಡುತ್ತಿರುವ ಈ ದಿನಗಳಲ್ಲಿ ಅಪೂರ್ವವಾದ ಒಂದು ಸೌಹಾರ್ದದ ಸ್ಟೋರಿಗಳನ್ನು ಆಗಾಗ ಮುಂದೆ ತರಬೇಕಾಗುತ್ತದೆ. ನೊಯಿಡದ ಹಿಂದೂ ಮತ್ತು ಮುಸ್ಲಿಮ್ ಕುಟುಂಬದ ಮಹಿಳೆಯರು ತಮ್ಮ ಕಿಡ್ನಿಯನ್ನು ಪರಸ್ಪರ ಪತಿಯಂದಿರಿಗೆ ದಾನ ನೀಡುವ ಮೂಲಕ ಸೌಹಾರ್ದ ಮೆರೆದಿದ್ದಾರೆ.  ಬಿಹಾರದ ಹಿಂದು ದಂಪತಿಗಳು ಮತ್ತು ಕಾಶ್ಮೀರದ ಮುಸ್ಲಿಂ ದಂಪತಿಗಳು ಕಿಡ್ನಿಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುವುದರ ಮೂಲಕ ಒಬ್ಬರ ಜೀವನವನ್ನು ಉಳಿಸಿಕೊಳ್ಳಲು ಇನ್ನೊಬ್ಬರು ನೆರವಾದರು.
ಕುಟುಂಬಗಳು ಇಂಟರ್ನೆಟ್ ಮೂಲಕ ಪರಸ್ಪರ ಸಂಪರ್ಕಗೊಂಡಿದ್ದು, 46 ವರ್ಷ ವಯಸ್ಸಿನ ಸುಜೀತ್ ಕುಮಾರ್ ಅವರ ಮೂತ್ರಪಿಂಡ 53 ವರ್ಷ ವಯಸ್ಸಿನ ಅಬ್ದುಲ್ ಅಜೀಜ್ ರವರ ಪತ್ನಿ ಶಾಝಿಯಾ ಅವರಿಗೆ ಸೂಕ್ತ ಎಂದು ಕಂಡು ಬಂದಿದ್ದು, ಏತನ್ಮಧ್ಯೆ, ಸುಜಿತ್ ಕುಮಾರ್ ಅವರ ಪತ್ನಿ ಮಂಜುಲಾ ದೇವಿಯವರಿಗೆ ಅಬ್ದುಲ್ ಅಜೀಜ್ ರವರ ಕಿಡ್ನಿ ಸರಿದೂಗುತ್ತದೆ ಎಂದು ತಿಳಿದು ಪರಸ್ಪರ ಕಿಡ್ನಿ ಬದಲಾಯಿಸಿದ್ದಾರೆ.

ಡಿಸೆಂಬರ್ನಲ್ಲಿ ಮೊಹಾಲಿ ಖಾಸಗಿ ಆಸ್ಪತ್ರೆಯಲ್ಲಿ ಈ ದಂಪತಿಗಳು ಮತ್ತು ಅವರ ಕುಟುಂಬಗಳು ಮೂತ್ರಪಿಂಡ ವಿನಿಮಯಕ್ಕಾಗಿ ಶಸ್ತ್ರಚಿಕಿತ್ಸೆಗೆ ಒಳಗಾಯಿತು. ಕಿಡ್ನಿ ಕಸಿಗಳಿಗೆ ಮೊಬೈಲ್ ಅಪ್ಲಿಕೇಶನ್ – ಐಕಿಡ್ನಿಯ ನೆರವು ಅವರು ಪಡೆದಿದ್ದರು.
ಧಾರ್ಮಿಕ ಭಿನ್ನತೆಗಳು ನಮ್ಮ ಶರೀರಕ್ಕೆ ಅನ್ವಯವಾಗದು. ಮೊದಲು ಬದುಕು ಮತ್ತೆ ಧರ್ಮ ಎಂದು ಸುಜೀತ್ ರವರ ಪತ್ನಿ ಹೇಳುತ್ತಾರೆ.
ನಮ್ಮ ಧರ್ಮಗಳು ಬೇರೆ ಬೇರೆಯಾಗಿದ್ದರೂ, ನಮ್ಮ ಮೂತ್ರ ಪಿಂಡದ ಧರ್ಮ ಒಂದೇ. ನಾವು ಆಗಾಗ ಪರಸ್ಪರ ಫೋನ್ ನಲ್ಲಿ ಮಾತಾಡುತ್ತಿರುತ್ತೇವೆ ಎಂದು ಅಜೀಜ್ ರವರ ಪತ್ನಿ ಹೇಳುತ್ತಾರೆ.

Leave a Reply