ಹಾಂಕಾಂಗ್: ಚೀನಾದಲ್ಲಿ ರಾಷ್ಟ್ರಗೀತೆ ಹಾಡಿದ ಯುಟ್ಯೂಬ್ ತಾರೆ ಯಂಗ್ ಕೈಲಿಗೆ(21) ಐದು ದಿವಸಗಳ ಕಾರಾಗೃಹ ವಾಸ ಶಿಕ್ಷೆ ವಿಧಿಸಲಾಗಿದೆ. ಚೀನದಲ್ಲಿ ಅತಿಹೆಚ್ಚು ಅಭಿಮಾನಿಗಳನ್ನು ಹೊಂದಿದ ಆನ್‍ಲೈನ್ ಸೆಲಬ್ರಿಟಿಗಳಲ್ಲಿ ಕೈಲಿ ಕೊಡಾ ಒಬ್ಬರಾಗಿದ್ದು ತನ್ನ ಲೈವ್ ಯುಟ್ಯೂಬ್ ಶೋದಲ್ಲಿ ಕಾರ್ಟೂನ್‍ನ ರೀತಿಯಲ್ಲಿ ವರ್ತಿಸಿ ರಾಷ್ಟ್ರಗೀತೆಯನ್ನು ಹಾಡಿದ್ದಕ್ಕಾಗಿ ಅವರಿಗೆ ಶಿಕ್ಷೆ ವಿಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೈಲಿ ರಾಷ್ಟ್ರಗೀತೆಯನ್ನು ಹಾಡುವ ವೇಳೆ ಪಾಲಿಸಬೇಕಾಗಿದ್ದ ಶಿಷ್ಟಾಚಾರವನ್ನು ಉಲ್ಲಂಘಿಸಿ ಬಫೂನ್ ರೀತಿ ವರ್ತಿಸಿದ್ದರು. ಅವರು ಗೀತೆಯ ಮೊದಲ ಸಾಲನ್ನು ಈ ರೀತಿ ಹಾಡಿದ್ದಕ್ಕೆ ಕೈಲಿ ವಿರುದ್ಧ ಕೇಸು ಹಾಕಲಾಯಿತು.

ರಾಷ್ಟ್ರಗೀತೆ ಹಾಡುವ ಸಮಯದಲ್ಲಿ ಕೈಲಿಯ ಉಡುಪು ಮತ್ತು ಅಂಗಚಲನೆ ರಾಷ್ಟ್ರಗೀತೆಯನ್ನು ಅಪಮಾನಿಸುವ ರೀತಿಯಲ್ಲಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.
ತನ್ನ ತಪ್ಪೇನೆಂದು ತನಗೆ ತಿಳಿದಿಲ್ಲ ಕೈಲಿ ಮೊದಲು ಹೇಳಿದರು. ಆದರೆ ನಂತರ ಕ್ಷಮೆ ಕೇಳಿದರು ಎಂದು ವರದಿಯಾಗಿದೆ. ಚೀನದಲ್ಲಿ ರಾಷ್ಟ್ರಗೀತೆಗೆ ಅಗೌರವ ತೋರಿಸಿದವರಿಗೆ ಕಠಿಣ ಶಿಕ್ಷೆ ನೀಡುವ ರೀತಿಯಲ್ಲಿ ಕಾನೂನು ತರಲಾಗಿದೆ.

Leave a Reply