1ವಿಯೆಟ್ನಾಂನಿಂದ ವೀಡಿಯೊವೊಂದು ವೈರಲ್ ಆಗಿದ್ದು, ಡೆಲಿವರಿ ಹುಡುಗನೊಬ್ಬ ಸಾಹಸವನ್ನು ಎಲ್ಲರೂ ಶ್ಲಾಘಿಸಿದ್ದಾರೆ. 12 ನೇ ಮಹಡಿಯಿಂದ ಬಿದ್ದ ಹೆಣ್ಣು ಮಗುವನ್ನು ಕ್ಯಾಚ್ ಮಾಡಿ ಆತ ಆ ಮಗುವಿನ ಜೀವ ರಕ್ಷಿಸಿದ್ದಾನೆ. ಹನೋಯಿಯಲ್ಲಿರುವ ಅಪಾರ್ಟ್ಮೆಂಟ್ನ 12 ನೇ ಮಹಡಿಯಿಂದ ಕೆಳಗೆ ಬೀಳುವುದನ್ನು ಸಿಸಿ ಕ್ಯಾಮರಾ ಮೂಲಕ ಸೆರೆಯಾಗಿದೆ.

ಘಟನೆಯ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಮಾಧ್ಯಮ ವರದಿಗಳ ಪ್ರಕಾರ, ಡೆಲಿವರಿ ಬಾಯ್ ಹೆಸರು ನ್ಗುಯೇನ್ ನ್ಗೋಕ್ ಮನ್ಹ್. ಪ್ಯಾಕೇಜ್ ತಲುಪಿಸಲು ನ್ಗುಯೇನ್ ಭಾನುವಾರ ಘಟನಾ ಸ್ಥಳಕ್ಕೆ ಆಗಮಿಸಿದಾಗ, ಕಟ್ಟಡದ 12 ನೇ ಮಹಡಿಯಿಂದ ಮಗು ಬೀಳುತ್ತಿರುವುದು ಆತನ ಗಮನಕ್ಕೆ ಬಂತು. ಮುಂಭಾಗದ ಕಟ್ಟಡದಲ್ಲಿದ್ದ ಮಹಿಳೆಯ ಕೂಗು ಕೂಡ ಅವನು ಕೇಳಿದನು. ತಕ್ಷಣ ಕಟ್ಟಡದ ಕೆಳಭಾಗಕ್ಕೆ ಧಾವಿಸಿ ಜನರೇಟರ್ ಸೈಟ್ನ ಛಾವಣಿಯ ಮೇಲೆ ಹತ್ತಿದನು, ಹೆಣ್ಣು ಮಗು ಕೆಳಗೆ ಬಂದ ಕೂಡಲೇ ನ್ಗುಯೆನ್ ಅವಳನ್ನು ಹಿಡಿದ. ಅಂದಹಾಗೆ, ಬಾಲಕಿಗೆ ಕೆಲವು ಗಾಯಗಳಾಗಿವೆ. ಅದೇ ಸಮಯದಲ್ಲಿ, ನ್ಗುಯೇನ್ ಅವರ ಕಾಲು ಸಹ ಉಳುಕಿದೆ, ಆದರೆ ಅವರು ಆರೋಗ್ಯವಾಗಿದ್ದಾರೆ.

Leave a Reply