ಬ್ರಿಟನ್‌ನಲ್ಲಿರುವ ದಂಪತಿ ಸುಮಾರು 1130 ಕೋಟಿ ರೂ. ಲಾಟರಿ ಗೆದ್ದಿದ್ದಾರೆ. ಆದರೆ, ಇಷ್ಟು ದೊಡ್ಡ ಮೊತ್ತವನ್ನು ಗೆದ್ದ ನಂತರವೂ ಅವರು ಸೆಕೆಂಡ್ ಹ್ಯಾಂಡ್ ಕಾರನ್ನು ಖರೀದಿ ಮಾಡಿದ್ದು ಅವರ ಹೆಣ್ಣುಮಕ್ಕಳು ಸೆಕೆಂಡ್ ಹ್ಯಾಂಡ್ ಕಾರುಗಳನ್ನು ಬಳಸುತ್ತಾರೆ. ಆದರೆ ಯಾಕೆ ಹೀಗೆ ಎಂದರೆ ನಿಮಗೆ ಆಶ್ಚರ್ಯ ಆಗಬಹುದು.

ಲಾಟರಿಯಲ್ಲಿ ಇಷ್ಟೊಂದು ದೊಡ್ಡ ಮೊತ್ತವನ್ನು ಗೆದ್ದ ನಂತರವೂ ಫ್ರಾನ್ಸಿಸ್ ಬದಲಾಗಲಿಲ್ಲ. ಅಹಂಕಾರ ದರ್ಪ ತೋರಿಸಲಿಲ್ಲ. ತನ್ನ ಬಣ್ಣ ಬದಲಾಯಿಸಲಿಲ್ಲ. ಅವರು ಈ ಹಣದಿಂದ 50 ಸ್ನೇಹಿತರು ಮತ್ತು ಸಂಬಂಧಿಕರಿಗೆ ಸಹಾಯ ಮಾಡಬೇಕೆಂದು ನಿರ್ಧರಿಸಿದರು. ಅವರು ಗೆದ್ದ ಲಾಟರಿ ಹಣದಿಂದ ಸುಮಾರು 175 ಕುಟುಂಬಗಳಿಗೆ ಸಹಾಯ ಮಾಡಿದರು. ಅವರ ಸಹಾಯದಿಂದ ಕುಟುಂಬಿಕರು ಮತ್ತು ಸ್ನೇಹಿತರು ತಮ್ಮ ಸಾಲಗಳನ್ನು ಮರುಪಾವತಿಸಿದ್ದಾರೆ.

the sun
the sun

ದಿ ಸನ್ ವರದಿಯ ಪ್ರಕಾರ, ಲಾಟರಿ ಗೆದ್ದ ಎರಡು ವರ್ಷಗಳಲ್ಲಿ ಅವರು ಅರ್ಧದಷ್ಟು ಹಣವನ್ನು ಜನರಿಗೆ ನೀಡಿದ್ದಾರೆ ಎಂದು ಹೇಳುತ್ತಾರೆ, ಅದು ಸುಮಾರು 600 ಕೋಟಿ ರೂಪಾಯಿಗಳು.

ಬ್ರಿಟನ್‌ನ ದಿ ನ್ಯಾಷನಲ್ ಲಾಟರಿಯ ಯುರೋ ಮಿಲಿಯನ್ ಕಾರ್ಯಕ್ರಮದಡಿಯಲ್ಲಿ ಫ್ರಾನ್ಸಿಸ್ ಮತ್ತು ಅವರ ಪತಿ ಪ್ಯಾಟ್ರಿಕ್ ಈ ಮೊತ್ತವನ್ನು ಗೆದ್ದಿದ್ದಾರೆ ಎಂಬುದು ತಿಳಿದು ಬಂತು.

dailymail
dailymail

Leave a Reply