ಸಾಂದರ್ಭಿಕ ಚಿತ್ರ - courtesy - India.com

ಹೊಸದಿಲ್ಲಿ: ಅಮೆಝಾನ್ ಆನ್‍ಲೈನ್ ಮಾರುಕಟ್ಟೆಯ ಬಗ್ಗೆ ಬಹುತೇಕ ಈಗ ಎಲ್ಲರಿಗೂ ಗೊತ್ತಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು ಉಪಯೋಗಿಸುವ ರೀತಿಯ ಕುರ್ತಾಗಳು ಮತ್ತು ಸೆಗಣಿಯ ಮತ್ತು ಗೋಮೂತ್ರದಲ್ಲಿ ಮಾಡಿದ ವಿವಿಧ ಉತ್ಪನ್ನಗಳು ಇನ್ನು ಆನ್‍ಲೈನ್ ಮಾರುಕಟ್ಟೆ ಅಮೆಝಾನ್ ಮನೆ ಬಾಗಿಲಿಗೆ ತಂದು ಕೊಡಲಿದೆ.

ಮಥುರಾದ ದೀನ್ ದಯಾಳ್ ಧಾಮ ಇಂತಹ 30 ವಸ್ತುಗಳನ್ನು ಅಮೆಝಾನ್ ಮೂಲಕ ಮಾರಾಟಕ್ಕಿಡುತ್ತಿದೆ. ಗೋಮೂತ್ರ, ಸೆಗಣಿಯಿಂದ ತಯಾರಿಸಿದ ಫೇಸ್‍ಪ್ಯಾಕ್‍ಗಳೂ, ಸುಗಂಧದ್ರವ್ಯಗಳು ಸಾಬೂನುಗಳು, ವಾತರೋಗದ ತೈಲಗಳು,ಟೂತ್ ಪೇಸ್ಟ್‍ಗಳು, ಶ್ಯಾಂಪುಗಳು, ಹತ್ತುರೀತಿಯ ಕುರ್ತಾಗಳು ಇತ್ಯಾದಿಗಳಿಗೆ ಅಮೆಝಾನ್ ಮಾರುಕಟ್ಟೆ ಒದಗಿಸಲಿದೆ.
ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಮತ್ತು ಯೋಗಿ ಆದಿತ್ಯನಾಥ್ ದೀನ್‍ದಯಾಳ್ ಧಾಮದ ಉತ್ಪನ್ನಗಳನ್ನು ಬೆಂಬಲಿಸಿದ್ದಾರೆ.

ಅಮೆಝಾನ್‍ನೊಂದಿಗೆ ಖಾದಿ ಮಾರಟಕ್ಕಾಗಿ ಉತ್ತರಪ್ರದೇಶದ ಸರಕಾರ ಕಳೆದ ಜುಲೈಯಲ್ಲಿ ಒಪ್ಪಂದಕ್ಕೆ ಸಹಿ ಹಾಕಿತ್ತು. ನಂತರ ಅಮೆಝಾನ್ ಗ್ರಾಮೀಣ ಪ್ರದೇಶಗಳ ಕುಶಲ ಕರ್ಮಿಗಳಿಗೆಉತ್ಪನ್ನಗಳನ್ನು ನೇರ ಮಾರಾಟಮಾಡುವ ಕುರಿತು ತರಬೇತಿ ನೀಡಲಿದ್ದೇವೆ ಎಂದು ಅಮೆಝಾನ್ ಕಂಪೆನಿ ಹೇಳಿತ್ತು.

Leave a Reply