ದುಬೈ: ಶಾರ್ಜದಿಂದ ಎಮಿರೇಟ್ ರಸ್ತೆಯಲ್ಲಿ ಸಂಚರಿಸುತ್ತಿದ್ದಾಗ 140 ಕಿಲೋಮೀಟರ್ ವೇಗದಲ್ಲಿ ನಿಯಂತ್ರಣ ಕಳಕೊಂಡ ಕಾರಿನ ಚಾಲಕನನ್ನು ದುಬೈ ಪೊಲೀಸರು ಸಾಹಸಿಕವಾಗಿ ಪಾರು ಮಾಡಿದ್ದಾರೆ. ವೇಗದ ನಿಯಂತ್ರಣ ಮೀರಿದಾಗ ದಿಕ್ಕೆಟ್ಟುಹೋಗಿದ್ದ ಚಾಲಕ ಬ್ಯಾರಿಕೇಡ್‍ಗೆ ಅಥವಾ ಬೇರೆ ವಾಹನಗಳಿಗೆ ಢಿಕ್ಕಿ ಹೊಡೆಸಿ ಕಾರನ್ನು ನಿಲ್ಲಿಸಲು ಶ್ರಮಿಸಿದಾಗ ಕಮೆಂಟ್ ಸೆಂಟರ್‍ನಿಂದ ಈತನಿಗೆ ಫೋನ್ ಮಾಡಿ ಧೈರ್ಯ ತುಂಬಿದ್ದರು.

ಇದೇವೇಳೆ ಎರಡು ಪೊಲೀಸ್ ಪಟ್ರೋಲ್ ತಂಡ ಅಪಘಾತ ಸಂಭವಿಸದಂತೆ ತಡೆಯಲು ರಸ್ತೆಯಿಂದ ಬೇರೆಲ್ಲ ವಾಹನಗಳನ್ನು ತೆರವು ಗೊಳಿಸಿದ್ದಾರೆ. ಹಲವು ಬಾರಿ ಪ್ರಯತ್ನಿಸಿದರೂ ಪ್ರಯೋಜನವಾಗಿರಲಿಲ್ಲ. ಆದರೆ ಶತತ ಪ್ರಯತ್ನದಲ್ಲಿ ಅಂತಿಮವಾಗಿ ಕಾರನ್ನು ರಸ್ತೆ ಬದಿಯಲ್ಲಿ ನಿಲ್ಲಿಸಲು ಚಾಲಕನಿಗೆ ಸಾಧ್ಯವಾಯಿತು.

Leave a Reply