ದೆಹಲಿಯ ಇಂಜಿನಿಯರ್ ತಮ್ಮ ಗರ್ಲ್ ಫ್ರೆಂಡ್ ನ ಸಹಾಯದಿಂದ ಪತ್ನಿಯನ್ನು ಕೊಂದು,ಅದನ್ನು ಆತ್ಮ ಹತ್ಯೆ ಯೆಂದು ಬಿಂಬಿಸಿದ ಘಟನೆ ನಡೆದಿದೆ. ದೆಹಲಿಯಲ್ಲಿ ಮೆಕ್ಯಾನಿಕಲ್ ಎಂಜಿನಿಯರೊಬ್ಬರನ್ನು ಮಾರ್ಚ್‌ನಲ್ಲಿ ನಡೆದ ಕೊಲೆಯ ಆರೋಪದಲ್ಲಿ ಅವರ ಗರ್ಲ್ ಫ್ರೆಂಡ್ ಜತೆ ಬಂಧಿಸಲಾಗಿದೆ.
ಪೋಲಿಸರ ಪ್ರಕಾರ,32 ವರ್ಷದ ಈ ಇಂಜಿನಿಯರ್ ಗರ್ಲ್ ಫ್ರೆಂಡ್ ನ ಜತೆ ಸೇರಿ ತನ್ನ ಪತ್ನಿಯ ಕೊಲೆಯ ಯೋಜನೆ ಹಾಕಿದರು ಹಾಗೂ ಅದನ್ನು ಆತ್ಮ ಹತ್ಯೆ ಎಂದು ಬಿಂಬಿಸಲು ಪ್ರಯತ್ನಿಸಿದರು. ಪೋಸ್ಟ್‌ ಮಾರ್ಟಮ್ ನಲ್ಲಿ ಕೊಲೆಯ ಬಗ್ಗೆ ತಿಳಿದು ಬಂದಾಗ ವಿಚಾರಣೆಯ ಬಳಿಕ ಇಬ್ಬರೂ ತಮ್ಮ ಅಪರಾಧವನ್ನು ಒಪ್ಪಿಕೊಂಡಿದ್ದಾರೆ.

ರಾಹುಲ್ ಕುಮಾರ್ ಮಿಶ್ರಾ ಮತ್ತು ಆತನ ಪ್ರೇಯಸಿ ಪದ್ಮ ತಿವಾರಿ(33) ಇಬ್ಬರ ಬಂಧನವನ್ನು ಡಿಸಿಪಿ (ನೈಋತ್ಯ) ದೇವೇಂದ್ರ ಆರ್ಯ ದೃಢಪಡಿಸಿದ್ದು, ಇವರು ಗುರ್ಗಾಂವ್ನಲ್ಲಿ ಎಂಎನ್ಸಿಯೊಂದಿಗೆ ಕಾರ್ಯನಿರ್ವಹಿಸುತ್ತಿದ್ದಾರೆ. ಇವರಿಬ್ಬರು ಶಾಲೆಯಲ್ಲಿ ಒಟ್ಟಿಗೆ ಕಲಿಯುತ್ತಿದ್ದರು. ಆಗ ಅವರಿಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ವಿಭಿನ್ನ ಜಾತಿಗೆ ಸೇರಿದ ಕಾರಣ ಮನೆಯವರು ಮದುವೆಗೆ ನಿರಾಕರಿಸಿದ್ದರು. ಮತ್ತೆ ಶಾಲೆಯ ವಾಟ್ಸಾಪ್ ಗ್ರೂಪ್ ಮೂಲಕ ಅವರು ಮತ್ತೆ ಪರಸ್ಪರ ಭೇಟಿಯಾಗಿದ್ದು, ತಮ್ಮ ಸಂಬಂಧವನ್ನು ಮುಂದುವರೆಸಿದ್ದರು.

Leave a Reply