ಸಾಂದರ್ಭಿಕ ಚಿತ್ರ

ಯುನೈಟೆಡ್ ನ್ಯಾಶನ್ಸ್: ಭಾರತದಲ್ಲಿ ಮದ್ಯ ಬಳಕೆ ಹೆಚ್ಚುತ್ತಿದೆ ಎಂದು ವಿಶ್ವಾರೋಗ್ಯ ಸಂಘಟನೆ ತಿಳಿಸಿದೆ. 2005ಕ್ಕೆ ಹೋಲಿಸಿದರೆ 2016 ರಲ್ಲಿ ದುಪ್ಟಟ್ಟು ಮದ್ಯಸೇವನೆ ನಡೆದಿದೆ ಎಂದು ವಿಶ್ವಾರೋಗ್ಯ ಸಂಘಟನೆ ಲೆಕ್ಕ ಬಹಿರಂಗ ಪಡಿಸಿದೆ.

2005 ರಲ್ಲಿ ಓರ್ವರ ಮದ್ಯೋಪಯೋಗ 2.4 ಲೀಟರ್ ಆಗಿದ್ದರೆ 2016 ರಲ್ಲಿ ಅದು 5.7ಲೀಟರ್ ಆಗಿ ಹೆಚ್ಚಿದೆ. ಪುರುಷರಲ್ಲಿ ಬಳಕೆ 4.2 ಲೀಟರ್ ಆದರೆ ಮಹಿಳೆಯರು 1.5ಲೀಟರ್ ಮದ್ಯ ಬಳಸುತ್ತಿದ್ದಾರೆ. ಭಾರತದಲ್ಲಿ ಮದ್ಯ ಬಳಕೆ ಈ ರೀತಿ ಹೆಚ್ಚುತ್ತಾ ಹೋದರೆ 2025 ಕ್ಕಾಗುವಾಗ ಏಷ್ಯದ ಅತ್ಯಂತ ಅಧಿಕ ಮದ್ಯ ಉಪಯೋಗಿಸುವ ರಾಷ್ಟ್ರ ಭಾರತ ಎನ್ನುವ ಕುಖ್ಯಾತಿ ಪಡೆಯಲಿದೆ ಎಂದು ವರದಿ ಬೆಟ್ಟು ಮಾಡಿದೆ. ಭಾರತಕ್ಕಿಂತ ಹೆಚ್ಚು ಜನಸಂಖ್ಯೆ ಚೀನದಲ್ಲಿದ್ದರೂ ಅಲ್ಲಿನ ಜನರು ಕಡಿಮೆ ಮದ್ಯ ಬಳಸುತ್ತಿದ್ದಾರೆ.

ಜಾಗತಿಕ ಮಟ್ಟದಲ್ಲಿ ಕುಡುಕರ ಸಂಖ್ಯೆಯಲ್ಲಿ ಹೆಚ್ಚಳವಾಗಲ್ಲ ಎಂದು ವರದಿ ತಿಳಿಸಿದೆ. 2005ರಲ್ಲಿ ಓಔರು 5.5 ಲೀಟರ್ ಮದ್ಯ ಕುಡಿಯುತ್ತಿದೆ. ಆದರೆ 2010ರ ಲೆಕ್ಕ ಪ್ರಕಾರ 6.4 ಲೀಟರ್ ಮದ್ಯ ಸೇವನೆಯಲ್ಲಿ ಹೆಚ್ಚಳ ಸಂಭವಿಸಿದೆ. 2016ರ ಲೆಕ್ಕ ಪ್ರಕಾರ ಜಗತ್ತಿನ ಮದ್ಯಪಾನದಲ್ಲಿ 23 ಲಕ್ಷ ಜನರು ದಿನಾಲು ಸಾಯುತ್ತಿದ್ದಾರೆ ಮತ್ತು ಹದಿಹರೆಯದವರಲ್ಲಿ ಮದ್ಯಪಾನ ಚಟ ಹೆಚ್ಚುತ್ತಿದೆ ಎಂದು ವಿಶ್ವಾರೋಗ್ಯ ಸಂಘಟನೆ ತಿಳಿಸಿದೆ.

Leave a Reply