ಹೊಸದಿಲ್ಲಿ: ಮಾನವಹಕ್ಕು ಕಾರ್ಯಕರ್ತರ ಗೃಹಬಂಧನ ಮುಂದುವರಿಸುವ ಸುಪ್ರೀಂಕೋರ್ಟಿನ ತೀರ್ಮಾನ ಪುಣೆ ಪೊಲೀಸರ ವಿಜಯವಾಗಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹೇಳಿದ್ದಾರೆ. ಪ್ರಕರಣದಲ್ಲಿ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟು ತಿಳಿಸಿದ್ದು ಪುಣೆ ಪೊಲೀಸರು ಸ್ಪಷ್ಟವಾದ ಪುರಾವೆಗಳನ್ನು ಹಾಜರು ಪಡಿಸಬೇಕೆಂದು ಫಡ್ನವಿಸ್ ಹೇಳಿದರು.

ಮಾನವಹಕ್ಕು ಕಾರ್ಯಕರ್ತರ ಬಂಧನದಲ್ಲಿ ರಾಜಕೀಯ ಒತ್ತಡವಿಲ್ಲ ಎಂದು ಸುಪ್ರೀಂಕೋರ್ಟು ಕಂಡು ಕೊಂಡಿದೆ. ಇದು ವಿರುದ್ಧ ಧ್ವನಿಯನ್ನು ದಮನಿಸುವ ಕ್ರಮವಲ್ಲ ಎಂದು ಕೋರ್ಟು ಹೇಳಿದೆ.ಪುಣೆ ಪೊಲೀಸರ ವಿಜಯವಿದು. ಕಳೆದ ಕೆಲವು ವರ್ಷಗಳಿಂದ ಮಾನವಹಕ್ಕು ಕಾರ್ಯಕರ್ತರು ಇದನ್ನೇ ಮಾಡುತ್ತಾ ಬಂದಿದ್ದಾರೆ. ಆದರೆ ಪುರಾವೆಗಳ ಅಭಾವದಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳದಂತಾಗಿತ್ತು ಎಂದು ಫಡ್ನವಿಸ್ ಹೇಳಿದರು.

ಇದೇ ವೇಳೆ ಮಾವೊಯಿಸ್ಟರಿಗೆ ಜಾಗವಿರುವ ಏಕೈಕ ಸ್ಥಳ ಕಾಂಗ್ರೆಸ್ ಆಗಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದರು. ಮಾವೋವಾದಿಗಳೊಂದಿಗೆ ಸಂಬಂಧ ಆರೋಪಿಸಿ ಪುಣೆ ಪೊಲೀಸರು ಬಂಧಿಸಿದ ಐವರು ಮಾನವಹಕ್ಕು ಕಾರ್ಯಕರ್ತರ ಗೃಹ ಬಂಧನವನ್ನು ನಾಲ್ಕುವಾರಗಳಿಗೆ ಸುಪ್ರೀಂಕೋರ್ಟು ವಿಸ್ತರಿಸಿದೆ ಇದೇ ವೇಳೆ ಮಾನವಹಕ್ಕು ಕಾರ್ಯಕರ್ತರು ವಿಚಾರಣಾ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಬಹುದು ಎಂದು ಸುಪ್ರೀಂಕೋರ್ಟು ತಿಳಿಸಿದೆ.

Leave a Reply