ಕಾಶ್ಮೀರ: ಗುರುವಾರ ಸಂಜೆ ದಕ್ಷಿಣ ಕಾಶ್ಮೀರದಲ್ಲಿ ಹಲವಾರು ಪೋಲಿಸ್ ಅಧಿಕಾರಿಗಳ ಮನೆಗಳಿಗೆ ಭಯೋತ್ಪಾದಕರು ದಾಳಿ ಮಾಡಿದ್ದು, ಐದು ಪೊಲೀಸರ ಕುಟುಂಬದ ಸದಸ್ಯರನ್ನು ಅಪಹರಿಸಿದ್ದಾರೆ ಎಂದು ಎನ್ಡಿಟಿವಿ ವರದಿ ಮಾಡಿದೆ.

ಪುಲಾವಮಾ, ಅನಂತ್ ನಾಗ್ , ಕುಲ್ಗಾಮ್ ಮತ್ತು ತರಲ್ ಎಂಬ ಪ್ರದೇಶಗಳಿಂದ ಈ ಅಪಹರಣ ನಡೆದಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಗುರುವಾರ ಪೊಲೀಸ್ ಸಿಬ್ಬಂದಿಯೊಬ್ಬನನ್ನು ಅಪಹರಿಸಲಾಗಿತ್ತು ನಂತರ ಆತನನ್ನು ಬಿಡುಗಡೆಗೊಳಿಸಿದ್ದರು. ಇದೀಗ ಪೊಲೀಸರ ಕುಟುಂಬದವರಿಗೆ ಯಾವುದೇ ತೊಂದರೆಯಾಗದೆ ಬಿಡುಗಡೆಗೊಳಿಸಲು ಕಾರ್ಯಚರಣೆ ಮುಂದುವರಿದೆಯೆಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ಇತ್ತೀಚಿನ ದಿನದಲ್ಲಿ ದಕ್ಷಿಣ ಕಾಶ್ಮೀರದ ಹಲವಾರು ಪ್ರದೇಶಗಳಲ್ಲಿ ಕಾಶ್ಮೀರ ಮಿಲಿಟಂಟ್ ಕುಟುಂಬದ ಸದಸ್ಯರ ಬಂಧನ ಮತ್ತು ಆ ಪ್ರದೇಶದಲ್ಲಿ ಇಬ್ಬರು ಭಯೋತ್ಪಾದಕರ ಮನೆಗಳನ್ನು ಬೆಂಕಿ ಹಚ್ಚಿದ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿದ್ದವು. ಪ್ರತಿಕಾರವಾಗಿ ಈ ಕೃತ್ಯ ನಡೆದಿರುವ ಸಂಭವದ ಬಗ್ಗೆ ಪೋಲಿಸರು ಅಭಿಪ್ರಾಯ ಪಟ್ಟಿದ್ದಾರೆ.

ಭದ್ರತಾ ಪಡೆಗಳು ಮಿಲಿಟೆಂಟ್ ಗಳು 4 ಪೊಲೀಸರನ್ನು ಹತ್ಯೆ ಮಾಡಿದ ಪ್ರತೀಕಾವಾಗಿ ಅವರ ಮನೆಗಳನ್ನು ಬೆಂಕಿಗಾಹುತಿ ಮಾಡಲಾಗಿತ್ತು ಎಂದು ಸ್ಪಷ್ಟನೆ ನೀಡಿದ್ದಾರೆ. ಕಳೆದ 28 ವರ್ಷಗಳಲ್ಲಿ ಇದೇ ಮೊದಲು ಪೊಲೀಸರ ಕುಟುಂಬಸ್ಥರನ್ನು ಗುರಿಯಾಗಿಸಲಾಗಿದೆ ಎಂದು ವರದಿಯಾಗಿದೆ.

Leave a Reply