ದಕ್ಷಿಣ ಚೀನಾದಲ್ಲಿನ ರೆಸ್ಟಾರೆಂಟ್ನ ವಿಲಕ್ಷಣ ಘಟನೆಯ ವಿಡಿಯೋ ವೈರಲ್ ಆಗಿದೆ. ಹಣದ ಕೊರತೆಯಿಂದಾಗಿ ತಂದೆ ತನ್ನ ಪುಟ್ಟ ಮಗಳನ್ನು ರೆಸ್ಟೊರೆಂಟ್ನಲ್ಲಿ ಅಡವಿಟ್ಟು ಹೋಗುವುದನ್ನು ಕಾಣಬಹುದು.

ಈ ಘಟನೆಯ ಸಿ.ಸಿ.ಟಿ.ವಿ ತುಣುಕು ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಸಂಚಲನ ಮೂಡಿಸಿದೆ. ಮಗು ಜೋರಾಗಿ ಅಳುತ್ತಾಳೆ ಮತ್ತು ತನ್ನ ತಂದೆಯ ಕಡೆಗೆ ಓಡುವುದನ್ನು ಕಾಣಬಹುದು.

ವರದಿಗಳ ಪ್ರಕಾರ, ವ್ಯಕ್ತಿಯು ರೂ. 62 ಮೌಲ್ಯದ ಊಟವನ್ನು ಸೇವಿಸಿದ್ದರು, ಆದರೆ ಹಣವನ್ನು ಪಾವತಿಸಲು ಸಾಧ್ಯವಾಗದ ಕಾರಣ ತನ್ನ 2 ವರ್ಷದ ಮಗಳನ್ನು ಬಿಟ್ಟು ಹೋದರು.

“ನಾನು ಅವಳನ್ನು ಇಲ್ಲಿ ಬಿಟ್ಟು ಹೋಗುತ್ತೇನೆ ನಾಳೆ ಹಣ ಕೊಟ್ಟು ಬಿಡುಗಡೆ ಮಾಡುತ್ತೇನೆ” ಎಂಬ ಷರತ್ತಿನ ಮೇಲೆ ಮಗುವನ್ನು ಬಿಟ್ಟು ಹೋಗಿದ್ದರು. ರೆಸ್ಟೋರೆಂಟ್ ಮಾಲೀಕರು ಹುಡುಗಿಯನ್ನು ಹಾಲು ಕೊಟ್ಟು ಚೆನ್ನಾಗಿ ಉಪಚರಿಸಿದ್ದೇವೆ ಎಂದು ಹೇಳಿದ್ದಾರೆ.

ತಂದೆಯ ಮರಳುವಿಕೆ ಕಾಣದಾದಾಗ ರೆಸ್ಟೋರೆಂಟ್ ನವರು ಮಗುವನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ತಂದೆ ಮರಳಿ ಬಂದಾಗ ಮಗುವನ್ನು ಕಾಣದೆ ದಂಗಾದರು. ಬಳಿಕ ಪೊಲೀಸ್ ಠಾಣೆಗೆ ಹೋಗಿ ಮಗುವನ್ನು ಪಡಕೊಂಡಿದ್ದು, ಈ ವೇಳೆ ಪೊಲೀಸರು ಹುಡುಗಿಯ ತಂದೆಯ ಚೆನ್ನಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.

 

Leave a Reply