ಓರ್ವ ಯುವ ಮಹಿಳೆ ಡಾಕ್ಟರ್ ಬಳಿ ಬಂದು “ಡಾಕ್ಟರ್, ನಾನು ಬಹಳ ಖಿನ್ನಳಾಗಿದ್ದೇನೆ. ತಾವು ಮಾತ್ರ ನನಗೆ ಸಹಾಯ ಮಾಡಬಲ್ಲಿರಿ.”

“ನಾನು ಮತ್ತೆ ಗರ್ಭಿಣಿ, ಈಗಾಗಲೇ ನನ್ನ ಕೈಯಲ್ಲಿ ಒಂದು ವರ್ಷದ ಹೆಣ್ಣು ಮಗು ಇದೆ.” ಅದಕ್ಕೆ ಡಾಕ್ಟರ್ ಹೇಳುತ್ತಾರೆ, ಸಹಾಯ ಏನು?

“ನೀವು ನನಗೆ ಗರ್ಭಪಾತ ಮಾಡುವಲ್ಲಿ ನೆರವಾಗಬೇಕು” ಎಂದು ಹೇಳಿದಳು. ಡಾಕ್ಟರ್ ಒಮ್ಮೆ ಸ್ತಬ್ಧರಾದರು. ನಂತರ ನಿಧಾನವಾಗಿ ಹೇಳಿದರು. ನಾನು ನಿನಗೆ ಇದಕ್ಕಿಂತ ಉತ್ತಮ ಪರಿಹಾರ ಮತ್ತು ನಿನ್ನ ಆರೋಗ್ಯಕ್ಕೆ ಉತ್ತಮವಾದ ಉಪಾಯ ವನ್ನು ಹೇಳಲೇ?” ಮಹಿಳೆಯ ಮುಖ ಅರಳಿತು. “ನಿಮಗೆ ಒಂದೇ ಸಮಯದಲ್ಲಿ ಎರಡು ಮಕ್ಕಳನ್ನು ನೋಡಲು ಸಾಧ್ಯವಾಗು ತ್ತಿಲ್ಲ. ಅದೂ ಹೆಣ್ಣು ಎಂಬ ಭಯವೂ ಇದೆ. ನೀವು ನಿಮ್ಮ ಕೈಯಲ್ಲಿರುವ ಮಗು ವನ್ನು ಕೊಂದು ಬಿಡಿ. ನಿಮ್ಮ ದೇಹಕ್ಕೆ ಯಾವುದೇ ಹಾನಿಯಿಲ್ಲ” ಎಂದು ಡಾಕ್ಟರ್ ಹೇಳಿದರು. “ಏನು ಡಾಕ್ಟರ್… ನಾನು ನನ್ನ ಕೈಯ್ಯಾರೆ ನನ್ನ ಪಾಪುವನ್ನು ಕೊಲ್ಲಬೇಕೇ? ಇದಂತು ಭಯಾನಕ!!! ಅಪರಾಧ!!!

ಡಾಕ್ಟರ್ ಹೇಳಿದರು, “ಒಂದು ಜನಿಸಿದ ಮಗು… ಇನ್ನೊಂದು ಜನಿಸುವ ಮಗು… ಅಪರಾಧ ಒಂದೇ…”

ಗರ್ಭಪಾತ ಅಥವಾ ಶಿಶುಹತ್ಯೆ ಹೆಸರು ಬೇರೆ ಬೇರೆಯಾದರೂ ಎರಡೂ ಕೊಲೆಯೇ. ಭಾರತದಲ್ಲಿ ಹೆಣ್ಣನ್ನು ಒಂದೆಡೆ ದೇವಿ, ಮಾತೆ ಎಂದು ಗೌರವಿಸಲಾದರೆ ಇನ್ನೊಂದೆಡೆ ಕೋಟಿಗಟ್ಟಲೆ ಕಂದಮ್ಮಗಳು ಬದುಕಿನ ಹಕ್ಕಿಗಾಗಿ ಹೆಣಗಾಡುತ್ತಿವೆ. ಬದುಕುವ ಹಕ್ಕನ್ನು ಕಸಿಯುವುದು ಘೋರ ಪಾಪವಾಗಿದೆ. ಯುದ್ಧ ಭಯೋತ್ಪಾದನೆ ಮತ್ತು ಅಪಘಾತಗಳ ಬಗ್ಗೆ ಚರ್ಚೆ ಮತ್ತು ಬೊಬ್ಬಿರಿಯುವವರು ಅದಕ್ಕಿಂತಲೂ ನೂರು ಪಟ್ಟು ಜೀವಗಳು ಬಲಿಯಾಗುತ್ತಿರುವು ದರ ಬಗ್ಗೆ ಗಮನ ನೀಡುತ್ತಿಲ್ಲ. ಜಗತ್ತಿ ನಲ್ಲಿ ಪುರುಷರೇ ಬಾಕಿ ಉಳಿದರೆ ಮುಂದಿನ ಪೀಳಿಗೆಯ ಅವಸ್ಥೆ ಏನಾಗಬಹುದು. ಭಾರತದಲ್ಲಿ ಪ್ರತಿ ವರ್ಷ 50 ಲಕ್ಷಕ್ಕಿಂತಲೂ ಅಧಿಕ ಭ್ರೂಣಹತ್ಯೆ ನಡೆಯುತ್ತಿದೆ ಎಂದು ಅಂದಾಜಿಸಲಾಗಿದೆ. ಸಂತಾನ ನಿಯಂತ್ರಣ, ಸಂತಾನ ಹರಣ ಜನಸಂಖ್ಯೆ ದುಷ್ಪರಿ ಣಾಮ, ಎಂಬ ಪೆÇಳ್ಳುತನವನ್ನು ಮುಂದಿಟ್ಟು ಸ್ವಾರ್ಥ ಪರ ಶಕ್ತಿಗಳು ಈ ಕಂದಮ್ಮಗಳ ಜೀವದೊಂದಿಗೆ ಚೆಲ್ಲಾಟ ವಾಡುತ್ತಿದ್ದಾರೆ. ಇನ್ನು ಈಗಿರುವ ಹತ್ತು ಪಟ್ಟು ಜನಸಂಖ್ಯೆ ವೃದ್ಧಿಸಿದರೂ ತಿಂದು ಮುಗಿಸಲಾರದಷ್ಟು ಈ ಭೂಮಿಯಲ್ಲಿ ಎಷ್ಟೊಂದು ಸಂಪನ್ಮೂಲವನ್ನು ದೇವನು ಇಟ್ಟಿರುತ್ತಾನೆ. ಅರೇಬಿಯದಲ್ಲಿ ಹೆಣ್ಣಿನ ಬದುಕುವ ಹಕ್ಕನ್ನು ಕಸಿಯಲಾಗಿತ್ತು. ಹೆಣ್ಣು ಹುಟ್ಟಿದರೆ ಅವರ ಮುಖ ಕಪ್ಪಾಗಿ ಅವರು ಅದನ್ನು ಜೀವಂತ ಹೂಳುತ್ತಿದ್ದರು. ಆದರೆ ಆ ಅನಾಗರಿಕ ಅರಬರೂ ನಾಚಿ ತಲೆ ತಗ್ಗಿಸುವಂತಹ ಘೋರ ಪಾಪವನ್ನು ಆಧುನಿಕ ಸ್ವಯಂ ಘೋಷಿತ ಶಿಕ್ಷಿತರು ಮಾಡುತ್ತಿದ್ದಾರೆ. ಹಳ್ಳಿಯ ಬಡವ ಇಂದೂ ತನ್ನ ಮಕ್ಕಳನ್ನು ಕಷ್ಟಪಟ್ಟು ಬಿಸಿಲನ್ನು ಸಹಿಸಿ ಸಾಕುತ್ತಿದ್ದಾನೆ. ಒಂದು ವೇಳೆ ಅವರಲ್ಲೂ ಈ ಕೆಡುಕು ಹಾಸು ಹೊಕ್ಕಾಗಿದ್ದರೆ ಅದಕ್ಕೆ ಕಾರಣ ಆಧುನಿಕತೆ ಹುಟ್ಟಿಸಿದ ಭ್ರಮೆಯೇ ಹೊರತು ಆ ಬಡಪಾಯಿ ಅಲ್ಲ.

ಧರ್ಮವು ಹೆಣ್ಣು-ಗಂಡು ಒಂದೇ ಆತ್ಮದಿಂದ, ಒಂದೇ ಜೀವದಿಂದ ಹುಟ್ಟಿದ್ದಾರೆ ಎಂದು ಹೇಳಿ ಮನುಷ್ಯರು ಎಂಬ ನಿಟ್ಟಿನಲ್ಲಿ ಇಬ್ಬರನ್ನೂ ಸರಿಸಮಾನ ಮತ್ತು ಒಂದೇ ತಕ್ಕಡಿಯಲ್ಲಿ ತೂಗಿದೆ. ಆಕೆಗೆ ಬದುಕುವ, ಶಿಕ್ಷಣದ, ಆಸ್ತಿಯ ಹಕ್ಕು ನೀಡಿದೆ. ಆಕೆ ಸ್ವರ್ಗಕ್ಕೆ ಹೋಗುವ ಅಮೂಲ್ಯ ಕೊಡುಗೆ ಎಂದು ಬಣ್ಣಿಸಿದೆ. ಆಕೆಯ ಜೀವದ ಜೊತೆ ಚೆಲ್ಲಾಟವಾಡುವ ಸಮಾಜ ಮತ್ತು ತಂದೆ-ತಾಯಿಗಳು ಸತ್ಯಮೇವ ಜಯತೆ ಎಂಬ ಅವಿೂರ್ ಖಾನ್‍ರ ಜಾಗೃತಿ ಕಾರ್ಯಕ್ರಮ ದಿಂದ ಕಣ್ಣೀರಿಸಿದ ಮಾತ್ರಕ್ಕೆ ಈ ಕೆಡುಕು ನಿಲ್ಲುವುದಿಲ್ಲ.

ಲೇಖಕರು : ಅಬೂ ಕುತುಬ್

Leave a Reply